
Read Time:41 Second
ಸುರತ್ಕಲ್,: ಮುಕ್ಕದ ಖಾಸಗಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಸಮುದ್ರ ಪಾಲಾದ ಘಟನೆ ರವಿವಾರ ಸಂಜೆ ನಡೆದಿದೆ. ಶಿವಮೊಗ್ಗದ ತಿಲಕ್ (21) ಸಮುದ್ರ ಪಾಲಾದ ವಿದ್ಯಾರ್ಥಿ. ಇಡ್ಯಾದಲ್ಲಿ ಬಾಡಿಗೆ ಮನೆಯಲ್ಲಿ ಇದ್ದ ಅವರು ಸಂಜೆ ವಿಹಾರಕ್ಕೆಂದು ತೆರಳಿದ್ದರು.


ಇತರ ವಿದ್ಯಾರ್ಥಿಗಳ ಜತೆ ಸಮುದ್ರದಲ್ಲಿ ಈಜಾಟ ನಡೆಸುತ್ತಿದ್ದಾಗ ಅಲೆಗೆ ಸಿಲುಕಿ ಕೊಚ್ಚಿ ಹೋಗಿದ್ದು, ಸ್ಥಳೀಯರ ನೆರವಿನಿಂದ ಮೃತದೇಹವನ್ನು ನೀರಿನಿಂದ ಮೇಲಕ್ಕೆ ತರಲಾಯಿತು.