
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿ ಯಡಿಯೂರಪ್ಪ ನಗರದಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳು ನೆಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.


ಮೃತರನ್ನು ಅವಿನಾಶ್, ಪತ್ನಿ ಮಮತಾ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲಬುರಗಿ ಮೂಲದ ಅವಿನಾಶ್ ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿತ್ತು. ಅವಿನಾಶ್ ಹಾಗೂ ಪತ್ನಿ, ಇಬ್ಬರು ಮಕ್ಕಳು ಬೆಂಗಳೂರಿನಲ್ಲಿ ನೆಲೆಸಿತ್ತು. ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅವಿನಾಶ್ ಮನೆಯಲ್ಲಿ ಹಣದ ಸಮಸ್ಯೆಯಿತ್ತು. ಸಾಲ ಸೂಲ ಮಾಡಿಕೊಂಡ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈ ವಿಚಾರಕ್ಕೆ ಮನನೊಂದ ಪತ್ನಿ ಮಮತಾ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಗಂಡ ಅವಿನಾಶ್ ಕೆಲಸಕ್ಕೆ ಹೋದ ಬಳಿಕ ಮಮತಾ ತನ್ನ ಇಬ್ಬರು ಮಕ್ಕಳನ್ನು ನೇಣು ಬಿಗಿದುಕೊಂದು ತಾನೂ ಕೂಡ ನೇಣಿಗೆ ಶರಣಾಗಿದ್ದಾರೆ.
5 ವರ್ಷಗಳಿಂದ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅವಿನಾಶ್ ಸುಮಾರು 6 ವರ್ಷದ ಹಿಂದೆ ಕಲಬುರಗಿಯಿಂದ ಬೆಂಗಳೂರಿಗೆ ಕುಟುಂಬ ಸಮೇತ ಬಂದಿದ್ದರಂತೆ. ಪತಿಯ ಆರ್ಥಿಕ ಸಂಕಷ್ಟದಿಂದ ಪತ್ನಿ ಮಮತಾ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಮೊದಲಿಗೆ ತನ್ನ ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಂದು ಬಳಿಕ ತಾನು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗಂಡನಿಗೆ ಕರೆ ಮಾಡಿ ಮಮತಾ ಮಾತನಾಡಿದ್ದಾರೆ ಎನ್ನಲಾಗಿದ್ದು, ಸಂಜೆ ಅವಿನಾಶ್ ಹಲವು ಬಾರಿ ಕರೆ ಮಾಡಿದರೂ ಸಹ ಫೋನ್ ರಿಸೀವ್ ಮಾಡಿಲ್ಲ. ಹೀಗಾಗಿ ಮೇಲಿನ ಮನೆಯವರಿಗೆ ಕರೆ ಮಾಡಿ ಪತ್ನಿಗೆ ಫೋನ್ ನೀಡುವಂತೆ ಹೇಳಿದ್ದಾರೆ. ಈ ವೇಳೆ ಅನೇಕ ಬಾರಿ ಮನೆಯ ಬಾಗಿಲು ಬಡಿದರೂ ತೆಗೆದಿಲ್ಲ.


ರಾತ್ರಿ 9 ಗಂಟೆ ವೇಳೆಗೆ ಅವಿನಾಶ್ ಮನೆಗೆ ವಾಪಸ್ ಬಂದಿದ್ದಾರೆ. ಮತ್ತೊಂದು ಕೀ ಇಂದು ಮನೆ ಬೀಗ ತೆಗೆದು ಒಳ ಹೋದಾಗ ಮಕ್ಕಳನ್ನ ಸಾಯಿಸಿ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ಪತ್ನಿ ಮಕ್ಕಳ ಸಾವನ್ನು ಕಂಡ ಅವಿನಾಶ್ ಪತ್ನಿಯ ಮೃತದೇಹವನ್ನು ತೆಗೆದು ಅದೇ ಹಗ್ಗಕ್ಕೆ ಅವಿನಾಶ್ ಕೂಡ ನೇಣಿಗೆ ಶರಣಾಗಿದ್ದಾರೆ.
