KKR vs SRH IPL 2024 Qualifier 1: ಹೈದರಬಾದ್‌‌ ದೈತ್ಯರನ್ನು ಕಟ್ಟಿಹಾಕಲು ಕೆಕೆಆರ್‌‌ ರಣತಂತ್ರ, ಗಂಭೀರ್‌ ಬ್ರಹ್ಮಾಸ್ತ್ರಕ್ಕೆ ಶೇಕ್‌ ಆಗುತ್ತಾ ಎಸ್‌ಆರ್‌ಎಚ್‌?

0 0
Read Time:3 Minute, 51 Second

ಸನ್‌ರೈಸರ್ಸ್ ಹೈದರಾಬಾದ್‌ನ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಕ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ ಈ ಬಾರಿಯ ಐಪಿಎಲ್‌ನಲ್ಲಿ ವಿಧ್ವಂಸಕ ಫಾರ್ಮ್‌ನಲ್ಲಿದ್ದಾರೆ. ವಿಶೇಷವಾಗಿ ಹೆಡ್-ಅಭಿಷೇಕ್-ಕ್ಲಾಸೆನ್ ಏಕಾಂಗಿಯಾಗಿ ಆಟದ ದಿಕ್ಕನ್ನೇ ಬದಲಾಯಿಸುತ್ತಿದ್ದಾರೆ. ಹೀಗಾಗಿ ಕೆಕೆಆರ್ ಈ ಪಂದ್ಯ ಗೆಲ್ಲ ಬೇಕಾದರೆ ಈ ಆಟಗಾರರನ್ನು ಮೊದಲು ನಿಯಂತ್ರಿಸಬೇಕು.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ 2024ರ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ. ಮೆಗಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಕ್ರಿಕೆಟ್ ಪ್ರೇಮಿಗಳು ಈ ಮೆಗಾ ಕಾದಾಟ ನೋಡಲು ಕಾಯುತ್ತಿದ್ದು, ಮತ್ತೊಂದು ಬಿಗ್‌ ಸ್ಕೋರ್‌ ಗೇಮ್‌ ನಿರೀಕ್ಷೆಯಲ್ಲಿದ್ದಾರೆ.

ಗ್ರೂಪ್ ಹಂತದಲ್ಲಿ ಹೈದರಾಬಾದ್ ವಿರುದ್ಧ ಕೆಕೆಆರ್ 4 ರನ್‌ಗಳ ಜಯ ಸಾಧಿಸಿತ್ತು. ಆದರೆ ಪ್ಲೇಆಫ್ ಪಂದ್ಯ ಸಂಪೂರ್ಣ ಭಿನ್ನವಾಗಿದೆ. ಕೋಲ್ಕತ್ತಾ ನೈಟ್‌‌ರೈಡರ್ಸ್ ಗೆಲುವಿನ ವಿಶ್ವಾಸವಿದೆ. ಆದರೆ, ಸನ್‌ರೈಸರ್ಸ್‌ನ ವಿಧ್ವಂಸಕ ಬ್ಯಾಟಿಂಗ್ ಕೆಕೆಆರ್‌ಗೆ ಕೊಂಚ ಆತಂಕ ತಂದಿದೆ. ಇದೇ ವಿಚಾರಕ್ಕೆ ಇದೀಗ ಕೆಕೆಆರ್ ತಂಡ ಹೊಸ ಬ್ರಹ್ಮಸ್ತ್ರ ಸಿದ್ಧಪಡಿಸಿದೆ.

ಸನ್‌ರೈಸರ್ಸ್ ಹೈದರಾಬಾದ್‌ನ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಕ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ ಈ ಬಾರಿಯ ಐಪಿಎಲ್‌ನಲ್ಲಿ ವಿಧ್ವಂಸಕ ಫಾರ್ಮ್‌ನಲ್ಲಿದ್ದಾರೆ. ವಿಶೇಷವಾಗಿ ಹೆಡ್-ಅಭಿಷೇಕ್-ಕ್ಲಾಸೆನ್ ಏಕಾಂಗಿಯಾಗಿ ಆಟದ ದಿಕ್ಕನ್ನೇ ಬದಲಾಯಿಸುತ್ತಿದ್ದಾರೆ. ಹೀಗಾಗಿ ಕೆಕೆಆರ್ ಈ ಪಂದ್ಯ ಗೆಲ್ಲ ಬೇಕಾದರೆ ಈ ಆಟಗಾರರನ್ನು ಮೊದಲು ನಿಯಂತ್ರಿಸಬೇಕು.

ಗೌತಮ್ ಗಂಭೀರ್, ಚಂದ್ರಕಾಂತ್ ಪಂಡಿತ್ ಮೆಗಾ ಮ್ಯಾಚ್ ಪ್ರವೇಶಿಸುವ ಮುನ್ನ ಎದುರಾಳಿ ತಂಡಕ್ಕೆ ಭಯ ಹುಟ್ಟಿಸುವ ಬ್ಯಾಟ್ಸ್ ಮನ್ ಗಳನ್ನು ತಡೆಯಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಅಹಮದಾಬಾದ್ ವಿಕೆಟ್‌ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ. ಇದಕ್ಕಾಗಿ ಕೋಲ್ಕತ್ತಾ ನೈಟ್‌‌ರೈಡರ್ಸ್ ತಂಡವು ಇಂದು ಹೈದರಾಬಾದ್ ವಿರುದ್ಧ ಸ್ಪಿನ್ ಅಸ್ತ್ರಗಳೊಂದಿಗೆ ಹೋರಾಡಲು ಸಜ್ಜಾಗಿದೆ.

ಕೆಕೆಆರ್‌ನ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಸಂದರ್ಶನವೊಂದರಲ್ಲಿ ಪ್ರತಿ ಆಟಗಾರನಿಗೆ ವಿಶೇಷ ಯೋಜನೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡವೂ ಸಹ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದೆ. ಅದರಲ್ಲೂ ಹೆಡ್ ಮತ್ತು ಅಭಿಷೇಕ್ ಅವರು ಎದುರಾಳಿ ತಂಡದ ವಿರುದ್ಧ ಬ್ಯಾಟಿಂಗ್ ಮೂಲಕ ದಾಳಿ ನಡೆಸುತ್ತಿದ್ದಾರೆ. ಆದರೆ ಅವರಿಗಾಗಿ ಯೋಜನೆ ಸಿದ್ಧವಾಗಿದೆ ಎಂದು ವರುಣ್ ಹೇಳಿದ್ದಾರೆ.

ಆದರೆ ಮಂಗಳವಾರ ಸಂಪೂರ್ಣ ಪಂದ್ಯ ಯಾವ ರೀತಿ ಇರುತ್ತದೆ ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ. ಅಲ್ಲದೇ ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಐಪಿಎಲ್‌ 17ನೇ ಸೀಸನ್‌ನ ಫೈನಲ್‌ಗೆ ತಲುಪಲಿದೆ. ಹೀಗಾಗಿ ಈ ಪಂದ್ಯದ ಗೆಲುವಿಗಾಗಿ ಉಭಯ ತಂಡಗಳ ನಡುವೆ ಬಿಗ್‌ ಫೈಟ್‌‌ ನಡೆಯುವ ನಿರೀಕ್ಷೆ ಹೆಚ್ಚಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *