
‘ವೈದ್ಯೋ ನಾರಾಯಣೋ ಹರಿಃ’ ಎಂಬ ಉಕ್ತಿಯಂತೆ ಮಂಗಳೂರು ನಗರ ಹಾಗು ಗ್ರಾಮಾಂತರ ಪ್ರದೇಶಗಳಲ್ಲಿ 25 ವರ್ಷಗಳ ಸಾರ್ಥಕ ಸಮಾಜಮುಖೀ ವೈದ್ಯಕೀಯ ಸೇವೆಯನ್ನು ನೀಡುವುದರ ಮೂಲಕ ಜನಪ್ರೀಯವಾಗಿರುವ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಇವರ ನೇತೃತ್ವದ ಸರ್ವಜ್ಞ ಸೆಕೆಂಡ್ ಒಪಿನಿಯನ್ ಸೆಂಟರ್ ಹತ್ತನೇ ವರ್ಷಕ್ಕೆ ಪದಾರ್ಪಣೆ ಮಾಡಿ ನಾಗರಿಕರಿಗೆ ಸೂಕ್ತ ಸಲಹೆ ಸೂಚನೆ ನೀಡುತ್ತಾ ಬಂದಿದೆ.



ಅವರು ಮಂಗಳೂರಿನ ವೀರನಗರ ಪಡೀಲ್ ಬಜಾಲ್ ಕಣ್ಣೂರು ಅರ್ಕುಲಾ ಮಂಗಳಾದೇವಿ ಗಳಲ್ಲಿ ಸಮಾಜಮುಖಿ ಸೇವೆಗಾಗಿ ಸ್ಥಾಪಿಸಿದ ಕುಲಾಲ್ ಹೆಲ್ತ್ ಸೆಂಟರ್ ಗೆ ಹಾಗೂ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನಕ್ಕೆ 25 ವರ್ಷ ತುಂಬಿದ್ದು ಹಲವಾರು ಸಮಾಜಮುಖಿ ಸೇವೆಗಳನ್ನು ನೀಡಿತ್ತಾ ಬಂದಿದೆ.

ಡಾ. ಅಣ್ಣಯ್ಯ ಕುಲಾಲ್


ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಳ್ತೂರು ಗ್ರಾಮದವರು. ಕೃಷಿಕ ಕುಟುಂಬದಿಂದ ಬಂದ ಇವರು, ವೈದ್ಯಕೀಯ ಶಿಕ್ಷಣವನ್ನು ಮುಗಿಸಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಕೆಲಸ ಮಾಡಿ ಬಳಿಕ ತಮ್ಮದೇ ಕ್ಲಿನಕ್ ಒಂದನ್ನು ಶುರುಮಾಡಿ ಸಾವಿರಾರು ಬಡ ರೋಗಿಗಳಿಗೆ ದಾನಿಗಳ ಮೂಲಕ ಉಚಿತ ಚಿಕಿತ್ಸೆಗಳನ್ನು ನೀಡುತ್ತಾ ಬಂದಿದ್ಧಾರೆ. ಶ್ರೀನಿವಾಸ್ ವಿವಿ , ವೆನ್ಲಾಕ್ ಆಸ್ಪತ್ರೆ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಪ್ರತಿಸ್ಥಿತ ಭಾರತೀಯ ವೈದ್ಯಕೀಯ ಸಂಘ. ಕುಟುಂಬ ವೈದ್ಯರ ಸಂಘಗಳಲ್ಲಿ ವೈದ್ಯಬರಹಗಾರರ ಬಳಗದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಜವಾಬ್ದಾರಿ ನಿರ್ವಹಿಸಿದವರು. ಅವರ ಸೇವೆಗೆ ಭಾರತೀಯ ವೈದ್ಯಸಂಘದಿಂದ ʻಸಮಾಜಮುಖಿ ವೈದ್ಯ ರಾಷ್ಟ್ರೀಯ ಪ್ರಶಸ್ತಿʼ (2015-2016), ಡಾ ಬಿ ಸಿ ರಾಯ್ ಪ್ರಶಸ್ತಿ ʻಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿʼ (2013), ʻದೇವರಾಜ ಅರಸು ರಾಜ್ಯ ಪುರಸ್ಕಾರʼ, ʻಸಾಧನ ರತ್ನ ಪ್ರಶಸ್ತಿʼ ಇನ್ನೂ ಅನೇಕ ಪ್ರಶಸ್ತಿಗಳು ಸಂದಿವೆ.
