
Read Time:1 Minute, 1 Second
ಮಂಗಳೂರು: ಕರಾವಳಿ ಮೂಲದ ಯುವಕ ಭಾರತೀಯ ಭೂ ಸೇನೆಗೆ ಹಾರ್ಮಡ್ ವಿಭಾಗದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.



ಮೂಲತಃ ಅತ್ತಾವರ ಇವಾಗ ಕುಲಶೇಖರದ ನಿವಾಸಿಯಾಗಿರುವ ದಯಾನಂದ್ ಹಾಗೂ KMC ಯ ಸ್ಟಾಪ್ ನರ್ಸ್ ಯಶಪ್ರಭರವರ ಪುತ್ರ ದರ್ಶನ್ ಡಿ ಕೋಟ್ಯಾನ್ ಮಂಗಳೂರಿನ ರೋಶನಿ ನಿಲಯದಲ್ಲಿ ಪ್ರಾಥಮಿಕ ಶಿಕ್ಷಣಗೈದಯ ಕೆನಾರ ಹೈಸ್ಕೂಲಿನಲ್ಲಿ SSLC ಮತ್ತು ಅಲೋಶಿಯಸ್ ಕಾಲೇಜುನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದರು.

ಇಂಜಿನಿಯರಿಂಗ್ ಮುಗಿಸಿ ಉತ್ತಮ ನೌಕರಿ ಪಡೆದಿದ್ದರು ದೇಶ ಕಾಯುವ ಸೇವೆಯನ್ನು ಮಾಡಬೇಕೆಂದು ಕನಸು ಹೊತ್ತಿದ್ದರು.
ಸುಮಾರು 80 ಸಾವಿರ ಅಭ್ಯರ್ಥಿಗಳ ಪೈಕಿ ಅಂತಿಮಾ ಸುತ್ತಿನಲ್ಲಿ ಆರು ಜನ ಯುವಕರು ನೇಮಕಾತಿ ಪಡೆದರು.

