
Read Time:1 Minute, 18 Second
ಮಂಗಳೂರು: ಹಬ್ಬದ ಜೊತೆಯಲ್ಲಿ ವೀಕೆಂಡ್ ಮೂಡ್ನಲ್ಲಿಇಂದು ಮುಂಜಾನೆ ಕದ್ರಿ ಪಾರ್ಕ್ಗೆ ಬಂದ ಜನರು ಆ ಒಂದು ಅತಿಥಿಯನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಮರದ ಮೇಲೆ ಹೆಬ್ಬಾವೊಂದು ಮಲಗಿದ್ದು ಜನರ ಈ ಆತಂಕಕ್ಕೆ ಕಾರಣವಾಗಿತ್ತು.


ತಕ್ಷಣ ಈ ವಿಚಾರವನ್ನು ಕದ್ರಿ ಪಾರ್ಕ್ ನಿರ್ವಾಹಕನ ಗಮನಕ್ಕೆ ತಂದಿದ್ದಾರೆ. ಬಳಿಕ ಅಗ್ನಿಶಾಮಕ ದಳದ ವಾಹನದ ಮೂಲಕ ಹೆಬ್ಬಾವಿನ ರಕ್ಷಣೆಗೆ ಮುಂದಾಗಿದ್ದಾರೆ. ಆದ್ರೆ, ಮರದ ಮೇಲೆ ಕೊಂಬೆಯಲ್ಲಿ ಸುತ್ತಿ ಮಲಗಿದ್ದ ಹೆಬ್ಬಾವನ್ನು ರಕ್ಷಣೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಹೀಗಾಗಿ ಪಿಲಿಕುಳದಿಂದ ನುರಿತ ಉರಗತಜ್ಞ ಭುವನ್ ಅವರನ್ನು ಸ್ಥಳಕ್ಕೆ ಕರೆಯಿಸಲಾಗಿದೆ.
ಪಿಲಿಕುಳದ ಉರಗ ತಜ್ಞ ಭುವನ್ ಹಾಗೂ ಅಗ್ನಿಶಾಮಕ ದಳದ ಜಂಟಿ ಕಾರ್ಯಾಚರಣೆಯ ಬಳಿಕ ಹೆಬ್ಬಾವನ್ನು ಸುರಕ್ಷಿತವಾಗಿ ಮರದಿಂದ ಕೆಳಗೆ ಇಳಿಸಿ ರಕ್ಷಣೆ ಮಾಡಲಾಗಿದೆ. ಹೆಬ್ಬಾವು ಸುಮಾರು 7 ರಿಂದ 8 ಅಡಿಗಳಷ್ಟು ಉದ್ದವಿದ್ದು, ಯಾವುದೋ ಆಹಾರ ಸೇವಿಸಿ ಮರ ಏರಿರುವ ಸಾಧ್ಯತೆ ಇದೆ.


