ಕಾರ್ಕಳ ಅತ್ಯಾಚಾರ ಪ್ರಕರಣ: ಹಿಂ.ಜಾ.ವೇ. ಕಾರ್ಯಕರ್ತ ಆರೋಪಿ ಎಂದು ಫೋಟೋ ಬಳಕೆ- ಪೊಲೀಸ್‌ ಠಾಣೆಗೆ ದೂರು

0 0
Read Time:1 Minute, 14 Second

ಕಾರ್ಕಳ : ಅತ್ಯಾಚಾರ ಪ್ರಕರಣದ ಆರೋಪಿಗೆ ಡ್ರಗ್ಸ್‌ ನೀಡಿದ ಮೂರನೆಯ ಆರೋಪಿ ಅಭಯ್ ಎಂದು ನನ್ನ ಫೋಟೋ ಬಳಸಿ ವಾಟ್ಸಪ್‌ನಲ್ಲಿ ಸುದ್ದಿ ಹಬ್ಬಿಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಅರವಿಂದ ಅವರು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿ ಅಭಯ್‌ನ ಬಂಧನವಾದ ಬಳಿಕ  ಕಣ್ಣೀರಿನ ನ್ಯಾಯಕ್ಕಾಗಿ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ 9900442728 ವಾಟ್ಸಾಪ್‌ ಸಂಖ್ಯೆಯಿಂದ ನನ್ನ ಫೋಟೋ ಬಳಸಿ ಸಂದೇಶ ರವಾನಿಸಿರುತ್ತಾರೆ. ಆ. 26ರಂದು ಕಾರ್ಕಳದಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ವೇಳೆ ತೆಗೆದ ನನ್ನ ಫೋಟೋವನ್ನು ಬಳಸಿರುತ್ತಾರೆ. ನನ್ನ ಫೋಟೋವನ್ನು ಅಭಯ್‌ ಎಂದು ವಾಟ್ಸಪ್ ಮೂಲಕ ಹರಡಿಸಿದ್ದಾರೆ. ಅಲ್ಲದೆ ಕಾರ್ತಿಕ್ ಎಂಬವರು ಈ ಫೋಟೋವನ್ನು ಸ್ಟೇಟಸ್‌ನಲ್ಲಿ ಹಾಕಿದ್ದಾರೆ ಎಂದು ಅರವಿಂದ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Happy
Happy
0 %
Sad
Sad
100 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *