
Read Time:50 Second
ಸುಬ್ರಹ್ಮಣ್ಯ: ಸಂಪ್ಯ ಸಮೀಪ ಕೆಯ್ಯೂರು ಗ್ರಾಮದ ಉಧ್ದೋಳೆ ನಿವಾಸಿ ಬಜರಂಗದಳ ಕೆಯ್ಯೂರು ಘಟಕದ ಸುರಕ್ಷಾ ಪ್ರಮುಖ್ ಸಚಿನ್ ಯು. (27) ಕೆಯ್ಯೂರು ಗ್ರಾಮ ಪಂಚಾಯತ್ ಸಮೀಪದ ಗೇರು ಮರಕ್ಕೆ ಕೇಸರಿ ಶಾಲು ಬಿಗಿದು ನೇಣು ಹಾಕಿಕೊಂಡ ಘಟನೆ ನಡೆದಿದೆ.


ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ ಕುಶಾಲಪ್ಪ ಗೌಡ, ತಾಯಿ ಪದ್ಮಾವತಿ, ಇಬ್ಬರು ಅಕ್ಕದಿರು, ಅಣ್ಣನನ್ನು ಅಗಲಿದ್ದಾರೆ.
ಮೃತರ ನಿವಾಸಕ್ಕೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದ್ದಾರೆ.


ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
