
ಪಡುಬಿದ್ರಿ: ಹೆಜಮಾಡಿಯ ಕೆ. ಆರ್ ಟೋಲ್ ಗೇಟ್‌ನಲ್ಲಿ ಮಂಗಳವಾರ ಬೆಳಿಗ್ಗೆ ದಾoಧಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕಾರು ಚಾಲಕನನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಬಂಧಿತ ಆರೋಪಿಯನ್ನು ದಕ್ಷಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲದ ಸಲೀಂ ಎಂದು ಗುರುತಿಸಲಾಗಿದೆ.
ಬೆಳಗ್ಗೆ 9.20ರ ವೇಳೆ ಬಂಟ್ವಾಳದಿಂದ ಸ್ನೇಹಿತರ ಜತೆ ಉಡುಪಿಗೆ ತೆರಳುತ್ತಿದ್ದ ಸಲೀಂ ಎಂಬಾತ ಹೆಜಮಾಡಿಯ ಟೋಲ್ ತಪ್ಪಿಸಲು ಮುಖ್ಯ ಟೋಲ್ ಬದಲು ಒಳ ರಸ್ತೆಯ ಟೋಲ್ನಲ್ಲಿ ತನ್ನ ವಾಹನ ತಂದ ಸಂದರ್ಭ ಟೋಲ್ ಸಿಬ್ಬಂದಿ ಅವನನ್ನು ತಡೆದಿದ್ದರು. ಈ ಸಂದರ್ಭ ಟೋಲ್ ಸಿಬ್ಬಂದಿಯ ಜೊತೆ ವಾಗ್ವಾದ ನಡೆಸಿ ವಾಹನವನ್ನು ಹಿಂದಕ್ಕೆ ಕೊಂಡು ಹೋಗಿದ್ದನು.

ಬೇರೆ ಕಾರೊಂದು ಟೋಲ್ ಗೆ ಬಂದ ಸಂದರ್ಭ ಅದರ ಹಿಂದಿನಿಂದ ಬಂದು ಏಕಾ ಏಕಿ ವಾಹನವನ್ನು ನುಗ್ಗಿಸಿ ಟೋಲ್ ತಪ್ಪಿಸುವ ಪ್ರಯತ್ನವನ್ನು ಕೂಡ ನಡೆಸಿದ್ದಾನೆ.

ಈ ಸಂದರ್ಭ ಟೋಲ್ ಸಿಬ್ಬಂದಿ ವಾಹನವನ್ನು ತಡೆದಿದ್ದಾರೆ ಈ ವೇಳೆ ಬಂಟ್ವಾಳದ ಯುವಕ ಕಾರಿನಿಂದ ಇಳಿದು ಟೋಲ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಒಳ ರಸ್ತೆಯ ಮೂಲಕ ಉಡುಪಿ ಕಡೆಗೆ ಪರಾರಿಯಾಗಿದ್ದ. ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.
ಸಿಸಿಟಿವಿ ಮೂಲಕ ವಾಹನನಂಬ್ರ ತಿಳಿದ ಟೋಲ್ ಸಿಬ್ಬಂಧಿ ಪಡುಬಿದ್ರೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಠಾಣಾಧಿಕಾರಿ ಪ್ರಸನ್ನ ತಕ್ಷಣ ವಾಹನ ಇರುವಿಕೆ ಪತ್ತೆ ಹಚ್ಚಿದ್ದರು. ವಾಹನ ಉಡುಪಿಯ ಸಭಾಂಗಣ ಒಂದರಲ್ಲಿ ಇರುವ ಬಗ್ಗೆ ಮಾಹಿತಿಯನ್ನು ಪಡೆದು ಅಲ್ಲಿಗೆ ತೆರಳಿ ವಾಹನ ಸಹಿತ ಹಲ್ಲೆ ನಡೆಸಿದ ಯುವಕನನ್ನು ಪಡುಬಿದ್ರೆ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ತೀವ್ರ ವಿಚಾರಣೆಯ ಬಳಿಕ ಆತನ ವಿರುದ್ಧ ಟೋಲ್ ಸಿಬ್ಬಂದಿ ದೀಕ್ಷಿತ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ

