
ತುಳುನಾಡಿನಲ್ಲಿ ಅದೆಷ್ಟೋ ಸಾವಿರ ವರ್ಷಗಳಿಂದ ದೈವಾರಾಧನೆ ಎನ್ನುವುದು ಅವೈದಿಕ ಮೂಲದ ಪದ್ಧತಿಯ ಆಧಾರದ ಮೇಲೆ ನಡೆದುಕೊಂಡು ಬರುತ್ತಿದ್ದೆ. ಕಾಲ ಕ್ರಮೇಣ ಮೂಲ ಪದ್ಧತಿಗಳು ಮರೆಯಾಗುತ ಬರುತ್ತಿದ್ದೆ. ಕೊಂಬು ತೆಂಬರೆ ತಾಸೆ ಡೋಲು ನುಡಿಸುವಲ್ಲಿ ಚೆಂಡೆ ಶಬ್ದ ಕಿವಿಗೆ ಕೇಳುತ್ತಿದೆ! ಕೋಳಿ ಬಲಿ ನೀಡುವ ಜಾಗಕ್ಕೆ ಕುಂಬಳಕಾಯಿ ಕುಯ್ಯುತಿದ್ದಾರೆ , ಧೂಪದ ಜಾಗಕ್ಕೆ ಆರತಿ ಬಟ್ಟಲು ಬಂದಿದೆ , ಅವಲಕ್ಕಿ ಪನಿಯಾರ ಬಡಿಸುವಲ್ಲಿ ಪಂಚ ಕಜ್ಜಾಯ ಸಿಗುತ್ತಿದೆ , ಸಂಧಿ ಪಾರ್ಧನ ಕೇಳುವಲ್ಲಿ ಮಂತ್ರ ಶ್ಲೋಕಗಳ ಉಚ್ಛಾರಣೆ ನಡೆಯುತ್ತಿದೆ! ಕೆಲವು ಕಡೆ ಕುಟುಂಬದ ವರ್ಷದ ಪರ್ವ ನೀಡದೆ ಬಾಕಿಯಾದಾರೆ ಇನ್ನು ಕೆಲವು ಕುಂಟುಂಬಗಳು ಅವೈದಿಕ ಪದ್ಧತಿ ಮರೆತು ವೈದಿಕ ಪದ್ಧತಿಯತ್ತ ಮುಖ ಮಾಡುತ್ತಿದೆ ಇಂತಹ ಕಾಲದ ಹೊಡೆತಕ್ಕೆ ತುಳುವರು ತಮ್ಮ ತನವನ್ನು ಮರೆಯುತ್ತಿರುವಾಗ ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆ ಇಂದು ನೆನಪಿಗೆ ಬರುತ್ತಿದೆ.



ಮಂಗಳೂರಿನ ಒಂದು ಕುಟುಂಬ ವರ್ಷದ ಕಲ್ಲುಟ್ಟಿ ಪಂಜುರ್ಲಿ ಪರ್ವದಂದು ಬೂತದ ಪೂಜಾರಿಗೆ ಎಣ್ಣೆ ಕೊಟ್ಟು ಸ್ನಾನ ಮುಗಿಸಿ ಬೂತಗಳಿಗೆ ಮಾಣಿಚ್ಚಿಲ್ಗೆ ನಿಲ್ಲಿಸಿದರು , ಎಲ್ಲರೂ ಕುಟುಂಬದ ಸದಸ್ಯರು ಸಾಲು ನಿಂತರು , ದೈವದ ನುಡಿಗೆ ಭಕ್ತಿಯಿಂದ ಕಿವಿಗೊಟ್ಟರು , ಮರದ ಪಲ್ಲಕ್ಕಿಯಲ್ಲಿ ಕುಳಿತ ತಂತ್ರಿಯನ್ನು ಕರೆದು ಮಾತಾಡಿಸಿತು ಕಲ್ಲುಟ್ಟಿ ಪಂಜುರ್ಲಿ ! ಇನ್ನು ನ್ಯಾಯ ತೀರ್ಮಾನದ ವಿಚಾರ ಬಂದಾಗ ಕಲ್ಲುರ್ಟಿ ಕೇಳಿತು ನನ್ನ ಕಯ್ಯಲ್ಲಿರುವ ಕುಲೆಗಳಿಗೆ ಏನು ಮಾಡುತ್ತೀರಾ ಎಂದು , ಕುಟುಂಬಸ್ಥರು ಹೇಳಿದರು ತಂತ್ರಿಗಳು ಕುಲೆ ಬಿಡಿಸುವ ಕಾರ್ಯ ಮಾಡಿದ್ದಾರೆ! ಹೀಗಿರುವಾಗ ದೊಡ್ಡ ಸ್ವರದಲ್ಲಿ ತಂತ್ರಿಗಳು ಕೇಳಿದರು ಏನು ಕಲ್ಲುರ್ಟಿ ನಾನು ಬಿಡಿಸಿದ ನಂತರವೂ ನಿನ್ನ ಕಯ್ಯಲ್ಲಿ ಯಾವುದು ಕುಲೆ ಇದೆಯೆಂದು ?
ಮುಗುಳ್ನಕ್ಕ ಕಲ್ಲುರ್ಟಿಯು ಏನು ತಂತ್ರಿಯವರೆ ನನ್ನ ಕುಟುಂಬದ ಕುಲೆ ನನ್ನ ಕಯ್ಯಲ್ಲಿ ಇರುವುದೋ ಇಲ್ಲ ನಿಮ್ಮ ಕಯ್ಯಲ್ಲಿ ಇರುವುದೋ ? ನಾನು ಬಿಟ್ಟು ಕೊಡದೆ ನೀವು ಹೇಗೆ ಬಿಟ್ಟು ಕೊಟ್ಟಿರಿ ಎಂದು ಕೇಳುವಾಗ ತಂತ್ರಿಯ ಮುಖ ಕೆಂಪಾಗಿ ಏನು ಕಲ್ಲುರ್ಟಿ ನಾನು ಮಾಡಿದ ಕಟ್ಟು ಕ್ರಮ ಇಲ್ಲಿಯವರೆಗೆ ತಪ್ಪಾಗಿಲ್ಲ, ಇದು ಮಾಯ ಮಾತನಾಡುವುದೂ ಇಲ್ಲ ಕಟ್ಟಿರುವ ಮಾನವ ಮಾತನಾಡುವುದೂ ಎಂದು ಬಿಟ್ಟರು?



ಮಾಣಿಚ್ಚಿಲ್ನಲ್ಲಿದ ಕಲ್ಲುರ್ಟಿ ಕೆಂಪು ಕಣ್ಣಿಂದ ನೊಡುತ್ತಾ ಗರ್ವದಿಂದ ಸರ್ಪದಂತೆ ಉಸಿರು ಬಿಡುತ್ತಾ ಏನು ತಂತ್ರಿಗಳೇ ನನ್ನ ಕೈಯಲ್ಲಿದ್ದ ಕುಲೆಗಳನ್ನ್ ತೋರಿಸಿದರೆ ನೀವು ಏನು ಮಾಡುವಿರಿ ಎಂದೆನ್ನ ಬೇಕಾದರೆ ತೋರಿಸಿ ಕೊಟ್ಟರೆ ನನ್ನ ತಂತ್ರಿವರ್ಗದ ಕೆಲಸವನ್ನೇ ಬಿಟ್ಟು ಬಿಡುತ್ತೇನೆ ಎಂದರು ! ಅಷ್ಟೊತ್ತಿಗೆ ಹತ್ತು ಹದಿನಾರು ಕಲೆ ತುಂಬಿ ಏಳು ಲೋಕದ ಕೋಪ ತೊಡುತ್ತಾ ಭೂಮಿ ನಡುಗಿಸುವ ಸ್ವರದಲ್ಲಿ ” ನಿಮ್ಮ ಮಂತ್ರ ದೊಡ್ಡದ ನನ್ನ ಮಾಯೆ ದೊಡ್ಡದಾ ” ಮೈ ಜುಮ್ಮೆನ್ನುವ ಬೊಬ್ಬಿಡುತ್ತಾ ಕಲ್ಲುರ್ಟಿ ತರವಾಡಿನ ಮೆಟ್ಟಿಲನ ಮೇಲೆ ಬಲ ಕಾಲಿಟ್ಟಿತು!

ಅಷ್ಟರಲ್ಲಿಯೆ ಬೊಬ್ಬಿಡುತ್ತ ಕುಟುಂಬದ ಇಬ್ಬರು ಕಿಟಕಿಯ ಸರಳಿನಲ್ಲಿ ನೇತಾಡ ತೊಡಗಿದರು, ಮೂರು ಜನ ನೆಲದ ಮೇಲೆ ಉರುಳಾಡ ತೊಡಗಿದರು, ಇನ್ನಿಬರು ಓಡಾಡುತ್ತಾ ಹಾರಾಡಿದರೆ ಮತ್ತೊಬ್ಬ ಹಲ್ಲು ಕಚ್ಚುತ್ತಾ ಕುಟುಂಬಸ್ಥರು ಮೇಲೆರಗಿದ , ಒಟ್ಟು ಎಂಟು ಕುಲೆ ಕಲ್ಲುರ್ಟಿ ಒಂದು ಆರ್ಭಟದಲ್ಲಿಯೆ ಬಿಟ್ಟು ಬಿಟ್ಟುಬಿಟ್ಟಿತು ! ಪೂರ್ತಿ ಕುಟುಂಬಸ್ಥರು ಗಂಡು ಹೆಣ್ಣು ಎನ್ನದೆ ಸ್ವಾಮಿ ಕಲ್ಲುರ್ಟಿ ಸಮಾಧಾನ ಮಾಡು ಎಂದು ಬೇಡ ತೊಡಗಿದರು , ಜೊತೆಗ ಇದ್ದ ಪಂಜುರ್ಲಿಯನ್ನು ನೋಡಿ ಏನು ಅಣ್ಣ ನಿನ್ನ ಕಯ್ಯಲ್ಲಿರುವ ಮೂರು ಕುಲೆಯನ್ನು ಬಿಡು ಅನ್ನುವಷ್ಟರಲ್ಲಿ ಮರದ ಪಲ್ಲಕ್ಕಿಯಲ್ಲಿ ಕುಳಿತಿದ್ದ ತಂತ್ರಿ ಮಾತ್ರ ಕಾಣೆಯಾಗಿದ್ದರು, ದೂರದಲ್ಲಿ ಗದ್ದೆಯ ನಡುವೆ ಹಿಂದೆ ಕೈ ಕಟ್ಟಿ ತಂತ್ರಿ ನಡೆದುಕೊಂಡು ಹೋಗುವುದು ಮಾತ್ರ ಕಾಣಿಸುತ್ತಿತ್ತು.

ಮಂತ್ರ ದೊಡ್ಡದಾ ಮಾಯೆ ದೊಡ್ಡದ ಎಂದು ಕೇಳಿದ ಪ್ರಶ್ನೆ ಮಾತ್ರ ತಂತ್ರಿ ಹಿಂದೆ ಹೋಗುವುದು ಕಂಡಿತು! ಇದು ತುಳುನಾಡಿನ ಸತ್ಯಗಳ ಹಿಡಿತ್ತಕ್ಕೆ ಇಟ್ಟ ಕೈಗನ್ನಡಿ. ದೈವಗಳಿಗೆ ಕುಟುಂಬದ ಹಿರಿಯನ ಪಾರಿ-ನುಡಿಯ ಬಲವೇ ಹೊರತು ಮಂತ್ರದ ಬಲ ಇಲ್ಲ. ದೈವ ಒಲಿಯುವುದು ಸಂಸ್ಕೃತದ ಮಂತ್ರಕ್ಕಲ್ಲ, ಕುಟುಂಬದ ಭಕ್ತಿಗೆ ಅಷ್ಟೇ. ಅದಕ್ಕೆ ದೈವ ಹೇಳುವುದು: ದೇವೆರೆಗ್ ಮಂತ್ರದ ಬಲ, ದೈವೊಲೆಗ್ ಪಾರಿದ ಬಲ.