ಬಂಟ್ವಾಳ: ಪೊಸಳ್ಳಿಯಲ್ಲಿ ಕುಲಾಲ ಕುಟುಂಬಗಳ ಸಮ್ಮಿಲನ ಸಂಭ್ರಮ

0 0
Read Time:2 Minute, 24 Second

ಬಿ.ಸಿ.ರೋಡ್ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಪೊಸಳ್ಳಿ ಇದರ ಆಶ್ರಯದಲ್ಲಿರುವ ಕುಲಾಲ ಸೇವಾದಳ ಮತ್ತು ಮಹಿಳಾ ಘಟಕದ ಸಹಯೋಗದೊಂದಿಗೆ ಕುಲಾಲ ಕುಟುಂಬಗಳ ಸಮ್ಮಿಲನ ಆಟಿ ತಿಂಗಳ ತಿನಸುಗಳ ಹಬ್ಬ ಕಾರ್ಯಕ್ರಮ ಆದಿತ್ಯವಾರ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.
ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಕೃಷ್ಣಪ್ಪ ಬಿ. ಸಮಾರಂಭವನ್ನು ಉದ್ಘಾಟಿಸಿ ಸಭಾಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಪ್ರಧಾನ ಕಾರ್ಯದರ್ಶಿ ನಾರಾಯಣ ಸಿ. ಪೆರ್ನೆ ತುಳುನಾಡು ಮತ್ತು ಆಟಿತಿಂಗಳ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಪ್ರಧಾನ ಕಾರ್ಯದರ್ಶಿ ರಮೇಶ್ ಬಿ., ಮತ್ತು ಕೋಶಾಧಿಕಾರಿ ಸೋಮನಾಥ ಸಾಲ್ಯಾನ್ ಆಗಮಿಸಿದ್ದರು. ವೇದಿಕೆಯಲ್ಲಿ ಕುಲಾಲ ಸೇವಾದಳದ ದಳಪತಿ ಗಣೇಶ್ ಕುಲಾಲ್ ಬೆದ್ರಗುಡ್ಡೆ, ಕಾರ್ಯದರ್ಶಿ ಚಂದ್ರಶೇಖರ ಕಾಮಾಜೆ, ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಮಚ್ಚೇಂದ್ರ ಮತ್ತು ಕಾರ್ಯದರ್ಶಿ ವಾರಿಜಾ ಚೇತನ್ ಉಪಸ್ಥಿತರಿದ್ದರು.
ಇದೇ ಸಂದರ್ಭ ಚೈತನ್ಯ ನಿರಂತರ ತರಬೇತುದಾರರಾದ ಚಿತ್ರಕಲಾ ಶಿಕ್ಷಕ ಚೆನ್ನಕೇಶವ, ಯೋಗ ಶಿಕ್ಷಕ ಕಿಶೋರ್ ಕೈಕುಂಜೆ, ಕೊಳಲು ತರಬೇತುದಾರ ಪ್ರೇಮನಾಥ ಕುಲಾಲ್ ನೇರಂಬೋಳು, ನಾಯಕತ್ವ ತರಬೇತುದಾರ ಸಂದೀಪ್ ಸಾಲ್ಯಾನ್ ಉಪಸ್ಥಿತರಿದ್ದರು.
ಮನಸ್ವಿ ಕುಲಾಲ್ ಸ್ವಾಗತಿಸಿದರು. ಶ್ರಾವಣಿ ವೈ.ಕೆ., ಗಗನ್, ದೃಶ್ಯ್, ಸಾಕ್ಷನ್, ತಸ್ವಿ, ದನ್ಶಿಕ್ ಪ್ರಾರ್ಥನೆ ಮಾಡಿದರು. ಮಿಥ್ವಿ ಜಿ. ಮೂಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಕನ್ಯಾ ಧನ್ಯವಾದ ನೀಡಿದರು. ಧನ್ಯಾ ಎಲ್. ಅಗ್ರಬೈಲು ತಿಂಡಿ ತಿನಿಸುಗಳ ವಿವರ ತಿಳಿಸಿದರು. ರಚನ್ ಬಡ್ಡಕಟ್ಟೆ ಪ್ರಬಂಧ ಸ್ಪರ್ಧೆ ವಿಜೇತರ ವಿವರ ಓದಿದರು. ವೈಷ್ಣವಿ ವೈ.ಕೆ., ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಕುಲಾಲ ಸೇವಾದಳದ ಸದಸ್ಯರು ಮತ್ತು ಮಹಿಳಾ ಘಟಕದ ಸದಸ್ಯರು, ಕಾರ್ಯಕಾರಿ ಸಮಿತಿ ಸದಸ್ಯರು ಕಾರ್ಯಕ್ರಮಕ್ಕೆ ಸಹಕರಿಸಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *