
ಮಂಗಳೂರು: ಕಳೆದ 25 ವರ್ಷದಲ್ಲಿಧಾರ್ಮಿಕ ಸಾಮಾಜಿಕ ಸೇವೆಯನ್ನು ಮಾಡಿಕೊಂಡು ಬರುತ್ತಿರುವ ಮಂಗಳೂರಿನ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ವತಿಯಿಂದ ಶ್ರೀ ರಾಮ ಸನಾತನ ಭಜಕರ ಒಕ್ಕೂಟದ ಸಹಕಾರದಲ್ಲಿ ಪ್ರಸಿದ್ಧ ತಂಡದ ಕುಣಿತ ಭಜನೆಯ ವಿಶೇಷ ಕಾರ್ಯಕ್ರಮ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರತಿಷ್ಠಾ ದಿನದ ಅಂಗವಾಗಿ ಶುಕ್ರವಾರ ಸಂಜೆ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಮಂಗಳಾ ದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಎಮ್ ಅರುಣ್ ಕುಮಾರ್ ದೀಪ ಬೆಳಗಿಸಿ ಕುಣಿತ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.



ಮಂಗಳೂರಿನಿ ಪ್ತಸಿದ್ಧ ಲೆಕ್ಕ ಪರಿಶೋಧಕ ಎಸ್.ಎಸ್ ನಾಯಕ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಂಗಳಾದೇವಿ ದೇವಸ್ಥಾನದ ಪ್ರತಿಷ್ಠೆಯ ದಿನದಂದೆ ಇಂತಹ ವಿನೂತನ ಕುಣಿತ ಭಜನೆ ಕಾರ್ಯಕ್ರಮ ಮಾಡಿದ್ದು ಶ್ಲಾಘನೀಯ ಎಂದರು.
ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು.
ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ, ಸುಧಾಕರ್ ರಾವ್ ಪೇಜಾವರ, ರಾಜೇಶ್ ಒಂಭತ್ತುಕೆರೆ ಮೊದಲಾದವರು ಉಪಸ್ಥಿತರಿ ದ್ದರು.
ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮಂಗಳಾದೇವೆ ದೇವಸ್ಥಾನದ ಸಾನಿಧ್ಯದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ಕುಣಿತ ಭಜನೆ ಸಂಕೀರ್ತನೆ ನಡೆಯಿತು.