
ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಇದರ ಪದಗ್ರಹಣ ಸಮಾರಂಭ ಮಂಗಳೂರು ಲಯನ್ಸ್ ಸೇವಾ ಮಂದಿರದಲ್ಲಿ ವಿವಿಧ ಸೇವಾ ಚಟುವಟಿಕೆಗಳೊಂದಿಗೆ ಜಿಲ್ಲಾ ಮಾಜಿ ಗವರ್ನರ್ ಶ್ರೀ ವಸಂತ್ ಕುಮಾರ್ ಶೆಟ್ಟಿ,ಶ್ರೀಮತಿ ದಿವ್ಯ ವಸಂತ್ ನೆರವೇರಿಸಿದರು.



ನಿಕಟ ಪೂರ್ವ ಅಧ್ಯಕ್ಷರಾದ ಲಯನ್ ಪಿ. ಸ್. ಆಳ್ವ ರವರು, ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಲೋಕೇಶ್, ಕೋಶಾಧಿಕಾರಿ ಶ್ರೀಮತಿ ಸರಸ್ವತಿ ಕುಳೂರ್ ಅಧಿಕಾರ ಹಸ್ತಾಂತರಿಸಿದರು.


ನೂತನ ಅಧ್ಯಕ್ಷರಾದ ಶ್ರೀ ಭಾರತೀ ವಿನೋದ್ ಕುಮಾರ್ ಶೆಟ್ಟಿ, ಜಿಲ್ಲಾ ಕ್ಯಾಬಿನೆಟ್ ಸೆಕ್ರೆಟರಿ ಸರೋಜ ರಾವ್, ಕ್ಲಬ್ ನ ಕಾರ್ಯದರ್ಶಿ ಮಾಲಿನಿ ವಸಂತ್, ಕೋಶಾಧಿಕಾರಿ ಸರೋಜ ರಾವ್, ರಿಜನಲ್ ಚೇರ್ ಪರ್ಸನ್ ಶ್ರೀಮತಿ ವೇಣಿ ಮರೋಲಿ, ಜೋನ್ ಚೇರ್ ಪರ್ಸನ್ ಲಯನ್ ಅನಿಲ್ ದಾಸ್, ಶ್ರೀ ವಿನೋದ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.



ಮಾಜಿ ರಾಜ್ಯಪಾಲರಾದ ಅರುಣ್ ಕುಮಾರ್ ಶೆಟ್ಟಿ, ಪ್ರಥಮ ರಾಜ್ಯಪಾಲರಾದ. ಬಿ ಎಂ ಭಾರತಿ, ಒಂದನೇ ರಾಜ್ಯಪಾಲರು ಶ್ರೀ ಅರವಿಂದ್ ಶೆಣೈ, ಶ್ರೀಮತಿ ಇಂದಿರಾ ಶೆಟ್ಟಿ, ಮಾತನಾಡಿ ಶುಭಾಶಯ ಸಲ್ಲಿಸಿದರು.


ಶ್ರೀಮತಿ ಮಮತ ತಾರನಾಥ್ ಶೆಟ್ಟಿ, ಪ್ರಾರ್ಥನೆಯನ್ನು ಮಾಡಿದರು. ಶ್ರೀಮತಿ ಕಲ್ಪನಾ ವೆಂಕಟೇಶ್ ರಾಜ್ಯಪಾಲರನ್ನು ಪರಿಚಯಿಸಿದರು. ಶ್ರೀಮತಿ ಮಾಲಿನಿ ವಸಂತ್ ದಾಸ್ ವಂದನಾರ್ಪಣೆ ಗೈದರು. ಬಳಿಕ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು..
