
ಮಂಗಳೂರು : ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಷ್ಠ ರೋಗ ನಿರ್ಮೂಲನಾಧಿಕಾರಿಗಳ ಕಚೇರಿ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮೆದುಳು ದಿನ ಕಾರ್ಯಕ್ರಮವನ್ನು ಜುಲೈ 22ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.



ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ನಿವಾಸಿ ವೈದ್ಯಧಿಕಾರಿಗಳಾದ ಡಾ. ಸುಧಾಕರ ಟಿ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ವಿಶ್ವ ಮೆದುಳು ದಿನ ಆಚರಿಸುವ ಉದ್ದೇಶವನ್ನು ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಹಿರಿಯ ವೈದ್ಯಧಿಕಾರಿಗಳಾದ ಮತ್ತು ಜಿಲ್ಲಾ ಆಸ್ಪತ್ರೆಯ ಮಟ್ಟದಲ್ಲಿ ಬ್ರೈನ್ ಹೆಲ್ತ್ ಕ್ಲಿನಿಕ್ ನ ನೋಡೆಲ್ ಆಫೀಸರ್ ಆದ ಡಾ. ಗಿರೀಶ್ ಕುಮಾರ್ ರವರು ಮಾತನಾಡಿ ನಮ್ಮ ದೇಹದಲ್ಲಿ ಮೆದುಳು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಮತ್ತು ಮೆದುಳಿನ ಆರೋಗ್ಯವನ್ನು ನಾವು ಕಾಪಾಡಿಕೊಂಡು ಬರದಿದ್ದರೆ ಯಾವ ರೀತಿಯ ನರಕೋಶದ ತೊಂದರೆಗಳು ಬರುತ್ತದೆ ಎನ್ನುವುದನ್ನು ವಿವರಿಸಿದರು. Palliative care ನ Incharge ಮತ್ತು ಐಎಂಎ ಕುಟುಂಬ ವೈದ್ಯರ ವಿಭಾಗದ ರಾಜ್ಯಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ರವರು, ಮೂಳೆರೋಗ ವಿಭಾಗದ ಮುಖ್ಯಸ್ಥರಾದ ಡಾ. ಕೆ. ಆರ್ ಕಾಮತ್ ರವರು, ಮನೋವೈದ್ಯಕೀಯ ರೋಗ ವಿಭಾಗದ ಮುಖ್ಯಸ್ಥರಾದ ಡಾ. ಸುನಿಲ್ ಕುಮಾರ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಅದೇ ರೀತಿ ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧಿಕಾರಿಗಳಾದ ಡಾ. ಮನೀಶ್, ಡಾ. ಅಶ್ವಿನ್, ಡಾ. Thafsiya ರವರು ಮತ್ತು ಬ್ರೈನ್ ಹೆಲ್ತ್ ಕ್ಲಿನಿಕ್ ನ ವೈದ್ಯರಾದ ಡಾ. ವಂಶಿ ಕೃಷ್ಣ ರೆಡ್ಡಿ ಯವರು ಮತ್ತು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬ್ರೈನ್ ಹೆಲ್ತ್ ಕ್ಲಿನಿಕ್ ನ ಮನಶಾಸ್ತ್ರಜ್ಞಾರಾದ ಕುಮಾರಿ ನಿಶ್ಚಿತ ಬಿ ಎಲ್ ರವರು ಪ್ರಾರ್ಥಿಸಿದರು. ಜಿಲ್ಲಾ ಸಂಯೋಜಕರಾದ ಶ್ರೀಮತಿ ಸೌಮ್ಯ ಆರ್ ಕೆ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. Physiotherapist ಆದ ಕುಮಾರಿ ಐಶ್ವರ್ಯ ಎಮ್ ಬಿ ಮತ್ತು ಸ್ಟಾಫ್ ನರ್ಸ್ ಆದ ಶ್ರೀಮತಿ ದಿವ್ಯ ಕುಮಾರಿ ಜಿ ಯವರು ಕಾರ್ಯಕ್ರಮ ಆಯೋಜಿಸುವಲ್ಲಿ ಸಹಕರಿಸಿದರು. NTCP ಯ ಆಪ್ತಸಮಾಲೋಚಕರಾದ ವಿಜಯ್ ಕುಮಾರ್ ರವರು ವಂದಿಸಿದರು.

