ಬಿಜೆಪಿ ಮುಂದೆ ಆರ್‌ಎಸ್‌ಎಸ್‌ ಅನ್ನು ಸಹ ‘ನಕಲಿ’ ಎನ್ನಬಹುದು: ಮೋದಿ ಹೇಳಿಕೆಗೆ ಉದ್ಧವ್ ಠಾಕ್ರೆ ಖಡಕ್ ರಿಪ್ಲೈ

0 0
Read Time:5 Minute, 41 Second

ಯಾವತ್ತು ಶಿವಸೇನೆಯು ಕಾಂಗ್ರೆಸ್ ಆಗುತ್ತದೋ ಅಂದು ಶಿವಸೇನೆಯನ್ನು ಕೊನೆಗೊಳಿಸುತ್ತೇನೆ ಎಂದು ಶಿವಸೇನೆ ಸ್ಥಾಪಕಾಧ್ಯಕ್ಷ ಬಾಳಾ ಠಾಕ್ರೆ ಅವರು ಹೇಳಿದ್ದರು. ಆದರೆ ಇಂದಿನ ಶಿವಸೇನೆಗೆ(ಉದ್ಧವ್ ಬಣ) ಯಾವುದೇ ಕುರುಹು ಇಲ್ಲದಾಗಿದ್ದು ಇದು ನಕಲಿ ಶಿವಸೇನೆ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಉದ್ಧವ್ ಠಾಕ್ರೆ, ನಾಳೆ ಮೋದಿ ಆರೆಸ್ಸೆಸ್ ಅನ್ನು ಸಹ ನಕಲಿ ಎಂದು ಕರೆದಲ್ಲಿ ಅಚ್ಚರಿ ಇಲ್ಲ. ಚುನಾವಣೆ ಬಳಿಕ ಯಾರು ಅಸಲಿ, ಯಾರು ನಕಲಿ ಎಂದು ತಿಳಿಯಲಿದೆ ಎಂದು ಸವಾಲು ಹಾಕಿದ್ದಾರೆ.

ಮುಂಬೈ/ಹೊಸದಿಲ್ಲಿ: “ಪ್ರಧಾನಿ ನರೇಂದ್ರ ಮೋದಿ ಅವರು ಶಿವಸೇನೆ(ಉದ್ಧವ್‌ ಬಣ)ಯನ್ನು ನಕಲಿ ಎಂದು ಕರೆದಿದ್ದಾರೆ. ನನ್ನನ್ನು ನಕಲಿ ಸಂತಾನ ಎಂದು ಟೀಕಿಸಿದರು. ಮುಂದಿನ ದಿನಗಳಲ್ಲಿಆರ್‌ಎಸ್‌ಎಸ್‌ ಅನ್ನೂ ಕೂಡ ನಕಲಿ ಎಂದು ಕರೆದರೆ ಅಚ್ಚರಿ ಇಲ್ಲ. ಸಂಘವನ್ನು ನಿಷೇಧಿಸುವ ಕ್ರಮಕ್ಕೂ ಹೋಗಬಹುದು,’’ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಶನಿವಾರ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘‘ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಮಹಾರಾಷ್ಟ್ರದಲ್ಲಿ ನೈಜ ಶಿವಸೇನೆ ಯಾವುದು ಎಂದು ಸ್ಪಷ್ಟವಾಗಲಿದೆ. ಬಾಳಾಸಾಹೇಬ್‌ ಠಾಕ್ರೆ ಅವರು ಮೋದಿ ಬೆನ್ನಿಗೆ ಬೆಂಬಲವಾಗಿ ನಿಂತಿದ್ದರು. ಅವರ ಶಿವಸೇನೆಯನ್ನೇ ಮೋದಿ ಅವರು ಸದ್ಯ ನಕಲಿ ಎಂದು ಟೀಕಿಸಿದ್ದಾರೆ,’’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೋದಿ ಹೇಳಿಕೆ ಏನು?

ಮಹಾರಾಷ್ಟ್ರದ ದಿಂಡೋರಿಯಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಬಹಿರಂಗ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು, “ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣವನ್ನು ನಕಲಿ ಎಂದು ಟೀಕಿಸಿದ್ದರು. ಶಿವಸೇನೆ (ಯುಬಿಟಿ) ಬಾಳಾ ಸಾಹೇಬ್ ಠಾಕ್ರೆ ಅವರನ್ನು ನಿರಾಸೆಗೊಳಿಸಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು. “ಕಾಂಗ್ರೆಸ್ ಎಷ್ಟು ಹೀನಾಯವಾಗಿ ಸೋತಿದೆ ಎಂದರೆ ಅವರಿಗೆ ಮಾನ್ಯ ಪ್ರತಿಪಕ್ಷವಾಗುವುದು ಕಷ್ಟ. ಮಹಾರಾಷ್ಟ್ರದ ಇಂಡಿ ಮೈತ್ರಿಕೂಟದ ನಾಯಕರೊಬ್ಬರು ಚುನಾವಣೆಯ ನಂತರ ಮಹಾರಾಷ್ಟ್ರದ ಎಲ್ಲಾ ಸಣ್ಣ ಪಕ್ಷಗಳನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಬೇಕು ಎಂದು ಸಲಹೆ ನೀಡಿದರು . ಈ ನಕಲಿ ಶಿವಸೇನೆ, ನಕಲಿ ರಾಷ್ಟ್ರೀಯವಾದಿ ಪಕ್ಷವು ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳುವುದು ಖಚಿತ . ಈ ಸಂದರ್ಭದಲ್ಲಿ ಬಾಳಾ ಸಾಹೇಬ್ ಠಾಕ್ರೆ ಅವರನ್ನು ಹೆಚ್ಚು ನೆನಪಿಸಿಕೊಳ್ಳುತ್ತೇನೆ, ಏಕೆಂದರೆ ಬಾಳಾ ಸಾಹೇಬರು ಶಿವಸೇನೆ ಕಾಂಗ್ರೆಸ್ ಆಯಿತು ಎಂದು ಭಾವಿಸಿದ ದಿನವೇ ಶಿವಸೇನೆಯನ್ನು ಕೊನೆಗೊಳಿಸುತ್ತೇನೆ ಎಂದು ಹೇಳುತ್ತಿದ್ದರು. ಅಂದರೆ ಈಗ ಯಾವುದೇ ಕುರುಹು ಇಲ್ಲವಾಗಿದ್ದಿ ಇದು ನಕಲಿ ಶಿವಸೇನೆ ಅಂದಿದ್ದರು” ಮೋದಿ ಅವರ ಈ ಹೇಳಿಕೆಗೆ ಉದ್ಧವ್ ಠಾಕ್ರೆ ತಿರುಗೇಟು ನೀಡಿದ್ದಾರೆ.

ಶುರುವಿನಲ್ಲಿ ಆರೆಸ್ಸೆಸ್ ಸಹಕಾರ ಬೇಕಿತ್ತು: ನಡ್ಡಾ

ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು,‘‘ಆರಂಭಿಕ ಹಂತದಲ್ಲಿ ಬಿಜೆಪಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಕಾರ ಇತ್ತು. ಅದರಂತೆ ಆರ್‌ಎಸ್‌ಎಸ್‌ ಮಾರ್ಗದರ್ಶನದಲ್ಲಿ ಬೆಳೆದಿರುವ ಬಿಜೆಪಿಯು ಸದ್ಯ ಸಕ್ಷಮವಾಗಿದೆ. ಆರ್‌ಎಸ್‌ಎಸ್‌ ತನ್ನದೇ ಸೈದ್ಧಾಂತಿಕ ನೆಲೆಯಲ್ಲಿಕೆಲಸ ಮಾಡುತ್ತಿದೆ,’’ ಎಂದು ಹೇಳಿದ್ದಾರೆ.

ರಾಷ್ಟ್ರೀಯ ದೈನಿಕವೊಂದರ ಸಂದರ್ಶನದಲ್ಲಿ ನಡ್ಡಾ ಅವರಿಗೆ ಅಟಲ್‌ ಬಿಹಾರಿ ವಾಜಪೇಯಿ ಅವರ ಕಾಲದಿಂದ ಈಗಿನವರೆಗೆ ಬಿಜೆಪಿಯಲ್ಲಿ ಆರ್‌ಎಸ್‌ಎಸ್‌ನ ಪ್ರಭಾವದ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಅವರು, ‘‘ ಸದ್ಯ ಬಿಜೆಪಿಯು ಸ್ವಂತ ಶಕ್ತಿಯ ಮೇಲೆ ಕೆಲಸ ಮಾಡುತ್ತಿದೆ. ಸಮರ್ಥವಾಗಿ ಬೆಳೆದಿರುವ ಪಕ್ಷವು ಮುಖಂಡರಿಗೆ, ಕಾರ್ಯಕರ್ತರಿಗೆ ಹಲವು ಕರ್ತವ್ಯಗಳು, ಜವಾಬ್ದಾರಿಗಳ ಹೊಣೆ ನೀಡಿದೆ. ಆರ್‌ಎಸ್‌ಎಸ್‌ ಒಂದು ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಸ್ಥೆ ಮತ್ತು ನಾವು ಒಂದು ರಾಜಕೀಯ ಸಂಸ್ಥೆ. ಸೈದ್ಧಾಂತಿಕವಾಗಿ ಆರ್‌ಎಸ್‌ಎಸ್‌ ತನ್ನ ಕೆಲಸ ಮಾಡುತ್ತಿದೆ. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಎಲ್ಲರಾಜಕೀಯ ಪಕ್ಷಗಳು ಕೂಡ ಹಾಗೆಯೇ ನಡೆದುಕೊಳ್ಳಬೇಕು,’’ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿವಾದಿತ ಸ್ಥಳಗಳಲ್ಲಿ ಮಂದಿರ ನಿರ್ಮಿಸಲ್ಲ

ಮುಂದಿನ ದಿನಗಳಲ್ಲಿ ಮಥುರಾ, ಕಾಶಿಯಲ್ಲಿನ ವಿವಾದಿತ ಸ್ಥಳಗಳಲ್ಲಿಮಂದಿರ ನಿರ್ಮಿಸುವ ಯೋಜನೆ ಇದೆಯೇ ಎಂಬ ಪ್ರಶ್ನೆಗೆ ನಡ್ಡಾ ಅವರು, ‘‘ ಬಿಜೆಪಿಗೆ ಅಂಥ ಆಲೋಚನೆಗಳಿಲ್ಲ. ನಮ್ಮ ಇಚ್ಛೆಯೂ ಅದಲ್ಲ. ಆ ಬಗ್ಗೆ ಚರ್ಚೆ ನಡೆಸುತ್ತಿಲ್ಲ. ಪಕ್ಷದ ಸಂಸದೀಯ ಮಂಡಳಿಯಲ್ಲಿ ನಡೆಯುವ ಚಿಂತನೆ, ಮಾತುಕತೆಗಳು ಹಾಗೂ ಕೆಲವು ನಿರ್ಣಯಗಳಿಗೆ ಸಿಗುವ ಅನುಮೋದನೆ ಪ್ರಕಾರ ಪಕ್ಷವು ಕಾರ್ಯನಿರ್ವಹಿಸುತ್ತದೆ,’’ ಎಂದು ತಿಳಿಸಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *