
Read Time:51 Second
ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಇದರ ನೂತನ ಅಧ್ಯಕ್ಷ ರಾಗಿ ಕುಲಾಲ ಸಮಾಜ ದ ಮಾದರಿ ನಾಯಕ ಲಯನ್ ಜಯರಾಜ್ ಪ್ರಕಾಶ್ ರವರು ಆಯ್ಕೆಗೊಂಡು ನಿನ್ನೆ ಅಧಿಕಾರ ಸ್ವೀಕರಿಸಿದರು. ಅವರಿಗೆ ಸಮಸ್ತ ಕುಲಾಲ ಸಮಾಜದ ಪರವಾಗಿ ಹಾರ್ಧಿಕ ಶುಭಾಶಯಗಳು ಸಲ್ಲಿಸಿದ್ದಾರೆ.



ಈ ಸಮಾರಂಭದಲ್ಲಿ PDG ಸಂಜೀತ್ ಶೆಟ್ಟಿ ಪದಗ್ರಹಣ ನಡೆಸಿಕೊಟ್ಟರು. ಅಧ್ಯಕ್ಷರಾಗಿ ಲಯನ್ ಜಯರಾಜ್ ಪ್ರಕಾಶ್, ಕಾರ್ಯದರ್ಶಿ ಲಯನ್ ರವಿ ಶಂಕರ್ ರೈ, ಕೋಶಧಿಕಾರಿ ನಾರಾಯಣ ಕೋಟಿಯನ್ ಹಾಗೂ ಇತರ ಪದಾಧಿಕಾರಿಗಳು ಮತ್ತು ಲಯನ್ಸ್ ಗಣ್ಯರು ಉಪಸ್ಥಿತರಿದ್ದರು. ಹಾಗೆ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಿದರು. ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸಿಕೊಟ್ಟರು.