ನಂದಿನಿ ಹಾಲನ್ನು ‘MRP’ಗಿಂತ ಹೆಚ್ಚು ಮಾರಾಟ ಮಾಡಿದ್ರೆ ಲೈಸೆನ್ಸ್ ರದ್ದು 

0 0
Read Time:3 Minute, 54 Second

ಬೆಂಗಳೂರು: KMFನಿಂದ ಎರಡು ದಿನಗಳ ಹಿಂದೆ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿತ್ತು. ರೂ.2 ಏರಿಕೆ ಮಾಡಿದ್ದರಿಂದ ವಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿ, ದರ ಇಳಿಕೆಗೂ ಒತ್ತಾಯಿಸಲಾಗಿತ್ತು. ಇದರ ನಡುವೆ ಕೆಲವು ವರ್ತಕರು ನಂದಿನಿ ಹಾಲಿನ ದರವನ್ನು ಎಂಆರ್ ಪಿಗಿಂತ ಹೆಚ್ಚಿಗೆ ಮಾರಾಟ ಮಾಡುತ್ತಿರೋದು ತಿಳಿದು ಬಂದಿದೆ.

ಇಂತವರಿಗೆ ನಂದಿನಿ ಹಾಲನ್ನು ಎಂಆರ್ ಪಿ ದರಕ್ಕಿಂತ ಹೆಚ್ಚು ಮಾರಾಟ ಮಾಡಿದ್ರೆ ಲೈಸೆನ್ಸ್ ರದ್ದುಗೊಳಿಸೋದಾಗಿ ಕೆಎಂಎಫ್ ಎಚ್ಚರಿಕೆ ನೀಡಿದೆ.

ನಂದಿನಿ ಹಾಲಿನ ಪ್ಯಾಕೇಟ್ 500 ಎಂಎಲ್ ನಿಂದ 550 ಎಂಎಲ್ ಹೆಚ್ಚಳ ಮಾಡಿ ಕೆಎಂಎಫ್ ದರವನ್ನೂ ರೂ.2 ಏರಿಕೆ ಮಾಡಲಾಗಿತ್ತು. ಒಂದು ಲೀಟರ್ ಹಾಲನ್ನು 1050 ಎಂಎಲ್ ಗೆ ಹೆಚ್ಚಳ ಮಾಡಿ ರೂ.2 ಏರಿಕೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ 500 ಎಂಎಲ್ ಇದ್ದಂತ ನಂದಿನಿ ಹಾಲಿನ ದರ 550 ಆದ ಬಳಿಕ ರೂ.22ರಿಂದ 24ಕ್ಕೆ ಏರಿಕೆಯಾಗಿತ್ತು.

ಇನ್ನೂ ನಂದಿನಿ 1 ಲೀಟರ್ ಹಾಲು 1050 ಎಂಎಲ್ ಗೆ ಏರಿಕೆಯಾಗಿ ರೂ.46 ಇದ್ದದ್ದೂ ರೂ.48ಕ್ಕೆ ಏರಿಕೆಯನ್ನು ಕೆಎಂಎಫ್ ಮಾಡಿತ್ತು. ಈ ಬಳಿಕ ಕೆಲವು ನಂದಿನಿ ಹಾಲಿನ ಬೂತ್ ಗಳಲ್ಲಿ ಎಂಆರ್ ಪಿ ದರಕ್ಕಿಂತ ಹೆಚ್ಚಿಗೆ ಹಣವನ್ನು ವಸೂಲಿ ಮಾಡಲಾಗುತ್ತಿರೋದಾಗಿ ಹೇಳಲಾಗುತ್ತಿತ್ತು. ಇಂತವರಿಗೆ ಎಚ್ಚರಿಕೆ ನೀಡಿರುವಂತ ಕೆಎಂಎಪ್ ನಂದಿನಿ ಹಾಲಿನ ದರವನ್ನು ಎಂಆರ್ ಪಿಗಿಂತ ಹೆಚ್ಚಿಗೆ ವಸೂಲಿ ಮಾಡುವಂತಿಲ್ಲ. ಒಂದು ವೇಳೆ ಹೆಚ್ಚಿಗೆ ಹಣ ಪಡೆಯುತ್ತಿರೋ ಬಗ್ಗೆ ಗ್ರಾಹಕರಿಂದ ದೂರು ಬಂದಿದ್ದೇ ಆದ್ರೇ ಅಂತಹ ನಂದಿನಿ ಹಾಲಿನ ಬೂತ್ ಲೈಸೆನ್ಸ್ ಕ್ಯಾನ್ಸಲ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಯಾವ ನಂದಿನಿ ಹಾಲಿಗೆ ಏಷ್ಟು ಬೆಲೆ ಹೆಚ್ಚಳ? ಇಲ್ಲಿದೆ ಡೀಟೆಲ್ಸ್

  • ಟೋನ್ಡ್ ಹಾಲಿನ ಬೆಲೆ 500 ಎಂಎಲ್ ಗೆ ರೂ.22 ಇದ್ದದ್ದು 24 ರೂ ಆಗಲಿದೆ. 1 ಲೀಟರ್ ಬೆಲೆ ರೂ.42ರಿಂದ 44ಕ್ಕೆ ಏರಿಕೆಯಾಗಲಿದೆ.
  • ಹೋಮೋಜಿನೈಸ್ಡ್ ಟೋನ್ಡ್ ಹಾಲು ಅರ್ಧ ಲೀಟರ್ ರೂ.22ರಿಂದ 24ಕ್ಕೆ ಏರಿಕೆಯಾದ್ರೇ, ಒಂದು ಲೀಟರ್ ಹಾಲಿನ ದರ ರೂ.43ರಿಂದ 45 ಆಗಲಿದೆ.
  • ಹೋಮೋಜಿನೈಸ್ಡ್ ಹಸುವಿನ ಹಾಲು ಅರ್ಧ ಲೀಟರ್ ರೂ.24ರಿಂದ 26 ರೂ ಆದ್ರೇ, 1 ಲೀಟರ್ ಹಾಲಿನ ಬೆಲೆ ರೂ.46ರಿಂದ 48 ಆಗಲಿದೆ.
  • ಸ್ಪೆಷಲ್ ಅರ್ಧ ಲೀಟರ್ ಹಾಲು ರೂ.25ರಿಂದ 27, 1 ಲೀಟಲ್ ರೂ.48 ರಿಂದ 50 ರೂ ಆಗಲಿದೆ.
  • ಶುಭಂ ಹಾಲು ಅರ್ಧ ಲೀಟರ್ ಗೆ ರೂ.25 ಇದ್ದದ್ದು 27 ಆಗಲಿದೆ. 1 ಲೀಟರ್ ಬೆಲೆ 48 ರಿಂದ 50 ರೂಗೆ ಏರಿಕೆಯಾಗಲಿದೆ.
  • ಸಮೃದ್ಧಿ ಹಾಲು ಅರ್ಧ ಲೀಟರ್ ಗೆ ರೂ.26ರಿಂದ 28, 1 ಲೀಟರ್ ಗೆ ರೂ.51 ರಿಂದ 53ಕ್ಕೆ ಹೆಚ್ಚಳ ಆಗಲಿದೆ.
  • ಹೋಮೋಜಿನೈಸ್ಡ್ ಶುಭಂ ಹಾಲಿನ ಅರ್ಧ ಲೀಟರ್ ಬೆಲೆ ರೂ.25ರಿಂದ 27 ಆದ್ರೇ, 1 ಲೀಟರ್ ಬೆಲೆ ರೂ.49 ರಿಂದ 51ಕ್ಕೆ ಏರಿಯಾಗಲಿದೆ.
  • ಸಂತೃಪ್ತಿ ಹಾಲಿನ ಬೆಲೆ ಅರ್ಧ ಲೀಟರ್ ರೂ.28ರಿಂದ 30ಕ್ಕೆ, 1 ಲೀಟರ್ ಬೆಲೆ ರೂ.55 ರಿಂದ ರೂ.57ಕ್ಕೆ ಹೆಚ್ಚಳವಾಗಲಿದೆ.
  • ಶುಭಂ ಗೋಲ್ಡ್ ಹಾಲು ಅರ್ಧ ಲೀಟರ್ ಗೆ ರೂ.26ರಿಂದ 28ಕ್ಕೆ ಏರಿಕೆಯಾದ್ರೇ, 1 ಲೀಟರ್ ಹಾಲಿನ ಬೆಲೆ ರೂ.49ರಿಂದ 51 ಆಗಲಿದೆ.
  • ಡಬಲ್ ಟೋನ್ಡ್ ಹಾಲಿನ ಬೆಲೆ ಅರ್ಧ ಲೀಟರ್ ಗೆ 21 ರೂನಿಂದ 23ಕ್ಕೆ, 1 ಲೀಟರ್ ಬೆಲೆ ರೂ.41ರಿಂದ 43ಕ್ಕೆ ಏರಿಕೆಯಾಗಲಿದೆ.
Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *