
Read Time:1 Minute, 28 Second
ಮಂಗಳೂರಿನ ಕಾವೂರು ಸೂಜಿಕಲ್ ನಲ್ಲಿ ಗುಡ್ದ ಕುಸಿದು ಬಿದ್ದಿದ್ದು, 6 ಮನೆಗಳಿಗಳಿಗೆ ಅಪಾಯ ತಂದೊಡ್ಡಿದೆ.


ನಿರ್ಮಾಣ ಹಂತದ ಕಟ್ಟಡದ ಬಳಿ ಗುಡ್ಡ ಕುಸಿತಗೊಂಡಿದ್ದು, 6 ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಖಾಸಗಿ ಕಟ್ಟಡ ನಿರ್ಮಾಣಕ್ಕಾಗಿ ಗುಡ್ಡ ಅಗೆಯಲಾಗಿತ್ತು ಎನ್ನಲಾಗಿದ್ದು, ಇದೀಗ ಸಂಪೂರ್ಣ ಗುಡ್ಡ ಕುಸಿದಿದ್ದು, ಸುತ್ತಮುತ್ತಲಿನ ಮನೆಗಳಿಗೆ ಅಪಾಯವುಂಟಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುರುಗನ್ ಭೇಟಿ ನೀಡಿದ್ದು, ಮುಂಜಾಗೃತಾ ಕ್ರಮವಾಗಿ 6 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.
ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು, ಕಟ್ಟಡ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ಅಧಿಕಾರಿಗಲಿಗೆ ಡಿಸಿ ಸೂಚಿಸಿದ್ದಾರೆ.


ಇನ್ನು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಭೂಮಿಯೇ ಕುಸಿದು ಹೋಗಿರುವ ಘಟನೆ ನಡೆದಿದೆ. ವರುಣಾರ್ಭಟಕ್ಕೆ ನೆಲವೇ ಕುಸಿದು ಹೋಗುತ್ತಿದ್ದು, ಹಿರ್ಗಾನ ಗ್ರಾಮದಲ್ಲಿ ಮನೆಯಂಗಳದಲ್ಲಿದ್ದ ಬಾವಿಯೊಂದು ನೋಡ ನೋಡುತ್ತಿದ್ದಂತೆಯೇ ಕುಸಿದು ಹೋಗಿದೆ.
