
Read Time:1 Minute, 0 Second
ಮಥುರಾ: ಇಲ್ಲಿನ ಬರ್ಸಾನಾ ಪ್ರದೇಶದ ರಾಧಾ ರಾಣಿ ದೇವಾಲಯದ ಮೆಟ್ಟಿಲು ಬಳಿ ಮಾಂಸ ಬೇಯಿಸುತ್ತಿದ್ದ ವ್ಯಕ್ತಿಯನ್ನು ಹಿಡಿದ ಸ್ಥಳೀಯರು ಆತನನ್ನು ಥಳಿಸಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದೇವಾಲಯದ ಆವರಣದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ. ಪೂಜಾಸ್ಥಳ ಅಪವಿತ್ರಗೊಳಿಸಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಸಂಜೆ ದೇಗುಲದ ಮೆಟ್ಟಿಲುಗಳ ಬಳಿ ಮಾಂಸಾಹಾರ ಬೇಯಿಸುತ್ತಿದ್ದ ಎಂದು ಸಂಜಯ್ಗೆ ಸ್ಥಳದಲ್ಲಿದ್ದ ಕೆಲವು ಭಕ್ತರು ಥಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನನ್ನು ಬಂಧಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

