ಮಗು ಒಳಗಿರೋದನ್ನು ಮರೆತು ಕಾರು ಲಾಕ್‌ ಮಾಡಿದ ಪೋಷಕರು; ಉಸಿರುಗಟ್ಟಿ ಮೂರು ವರ್ಷದ ಬಾಲಕಿ ಸಾವು!

0 0
Read Time:3 Minute, 54 Second

ಕಾರಿನೊಳಗೆ ಮಕ್ಕಳು ಲಾಕ್‌ ಆಗಿ ಉಸಿರುಗಟ್ಟಿ ಸಾವನ್ನಪ್ಪೋ ಘಟನೆಗಳು ಆಗಾಗ ನಡೀತಾನೆ ಇರುತ್ತವೆ. ಹಾಗೆಯೇ ಇಲ್ಲೊಂದೆಡೆ ಪೋಷಕರು ಮಗು ಒಳಗಿರೋರದನ್ನು ಮರೆತು ಕಾರ್ ಲಾಕ್ ಮಾಡಿ ಮದುವೆ ಮನೆಗೆ ಹೋಗಿದ್ದಾರೆ. ಮೂರು ವರ್ಷದ ಬಾಲಕಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ.

ರಾಜಸ್ಥಾನದ ಕೋಟಾದಲ್ಲಿ ಪೋಷಕರು ಮಗು ಒಳಗಿರೋರದನ್ನು ಮರೆತು ಕಾರ್ ಲಾಕ್ ಮಾಡಿದ್ದು,  3 ವರ್ಷದ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮದುವೆಗೆ ಹೊರಟಿದ್ದ ಪೋಷಕರು ಮದುವೆ ಮನೆ ತಲುಪಿದಾಗ ಗಡಿಬಿಡಿಯಲ್ಲಿ ಕಾರು ಲಾಕ್‌ ಮಾಡಿ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಮಗು ಕಾರಿನೊಳಗಿದೆ ಎಂಬುದನ್ನು ಮರೆತುಬಿಟ್ಟಿದ್ದಾರೆ. ಉಸಿರುಗಟ್ಟಿ ಮೂರು ವರ್ಷದ ಬಾಲಕಿ ಸಾವನ್ನಪ್ಪಿದ್ದಾ. ಜೋರಾವರಪುರ ಗ್ರಾಮದಲ್ಲಿಘಟನೆ ನಡೆದಿದ್ದು, ಮೃತ ಬಾಲಕಿಯನ್ನು ಗೋರ್ವಿಕಾ ಎಂದು ಪೊಲೀಸರು ಗುರುತಿಸಿದ್ದಾರೆ.

ಸಂತ್ರಸ್ತೆಯ ತಂದೆ ಪ್ರದೀಪ್ ನಗರ, ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಕೋಟಾದ ಜೋರಾವರಪುರ ಗ್ರಾಮಕ್ಕೆ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಸ್ಥಳವನ್ನು ತಲುಪಿದ ನಂತರ, ಗೋರ್ವಿಕಾ ಅವರ ತಾಯಿ ಮತ್ತು ಇನ್ನೊಬ್ಬ ಬಾಲಕಿ ಕಾರಿನಿಂದ ಇಳಿದರು. ಪ್ರದೀಪ್ ಕಾರು ಪಾರ್ಕ್ ಮಾಡಲು ಹೋದರು. ಗೋರ್ವಿಕ ತನ್ನ ಹೆಂಡತಿ ಮತ್ತು ಹಿರಿಯ ಮಗಳೊಂದಿಗೆ ಹೊರಟು ಹೋಗಿದ್ದಾಳೆ ಎಂದು ಭಾವಿಸಿದ ಪ್ರದೀಪ್ ಕಾರನ್ನು ಪಾರ್ಕ್ ಮಾಡಿದ ನಂತರ ಲಾಕ್ ಮಾಡಿದನು. ಗೋರ್ವಿಕಾಳ ತಾಯಿ ಮಗು ಅಪ್ಪನ ಜೊತೆ ಬರುತ್ತಿದ್ದಾಳೆ ಎಂದುಕೊಂಡಳು.

ಮದುವೆ ಸಮಾರಂಭದಲ್ಲಿ ಮಗು ಕಾರಿನಿಂದ ಇಳಿದಿಲ್ಲ ಎಂಬುದು ಮನೆಯವರಿಗೆ ತಿಳಿದಿರಲಿಲ್ಲ. ಖತೋಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಬನ್ನಾ ಲಾಲ್ ಅವರ ವರದಿಯ ಪ್ರಕಾರ, ಆಕೆಯ ತಂದೆ ಅವಳು ತನ್ನ ತಾಯಿಯೊಂದಿಗೆ ಇದ್ದಾಳೆ ಎಂದು ಭಾವಿಸಿದ್ದಳು ಮತ್ತು ಅವಳ ತಾಯಿ ಅವಳು ತನ್ನ ತಂದೆಯೊಂದಿಗೆ ಇದ್ದಾಳೆ ಎಂದು ಭಾವಿಸಿದ್ದಳು.

ಅಂತಿಮವಾಗಿ, ಸಮಾರಂಭದಲ್ಲಿ ತಂದೆ-ತಾಯಿ ಮಗು ಇಬ್ಬರೂ ಜೊತೆಗಿಲ್ಲ ಎಂದು ಅರಿತುಕೊಂಡರು. ಕಾರು ಪಾರ್ಕಿಂಗ್ ಮಾಡಿದ ಸ್ಥಳಕ್ಕೆ ಧಾವಿಸಿದರು. ಬಾಲಕಿ ಕಾರಿನ ಹಿಂದಿನ ಸೀಟಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿದ್ದಾಳೆಂದು ಘೋಷಿಸಿದರು. ಬಾಲಕಿ ಸುಮಾರು ಎರಡು ಗಂಟೆಗಳ ಕಾಲ ಕಾರಿನಲ್ಲಿ ಲಾಕ್ ಆಗಿದ್ದಳು ಎಂದು ತಿಳಿದುಬಂದಿದೆ.

ಕಳೆದ ತಿಂಗಳು, ಏಳು ವರ್ಷದ ಬಾಲಕ ಮತ್ತು ಅವನ ಐದು ವರ್ಷದ ಸಹೋದರಿ ಮುಂಬೈನಲ್ಲಿ ಕಾರಿನಲ್ಲಿ ಲಾಕ್ ಮಾಡಿದ ನಂತರ ಉಸಿರುಗಟ್ಟಿ ಸಾವನ್ನಪ್ಪಿದರು. ಏಪ್ರಿಲ್ 24 ರಂದು ಮಧ್ಯಾಹ್ನ 1.30 ರ ಸುಮಾರಿಗೆ ಸಾಜಿದ್ ಮೊಹಮ್ಮದ್ ಶೇಖ್ ಮತ್ತು ಅವರ ಸಹೋದರಿ ಮುಸ್ಕಾನ್ ಶೇಖ್ ಅವರು ಸಿಜಿಎಸ್ ಕಾಲೋನಿ, ಸೆಕ್ಟರ್ 5, ಸಿಯಾನ್ ಕೋಳಿವಾಡದಲ್ಲಿರುವ ಅವರ ಒಂದು ಕೋಣೆಯ ಮನೆಯ ಬಳಿ ಆಟವಾಡಲು ಹೊರಗೆ ಹೋಗಿದ್ದಾಗ ಕಾರಿನಲ್ಲಿ ಅಡಗಿ ಕುಳಿತಿದ್ದರು. ಬಾಗಿಲು ತೆರೆಯುವುದು ಹೇಗೆಂದು ತಿಳಿಯದ ಕಾರಣ ಅವರು ಒಳಗೆ ಸಿಕ್ಕಿಹಾಕಿಕೊಂಡಿದ್ದರು. ಗಂಟೆಗಳ ನಂತರ ಮಕ್ಕಳ ಮೃತದೇಹವನ್ನು ಹೊರತೆಗೆಯಲಾಗಿತ್ತು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *