
ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ಸಮಿತಿ ಸದಸ್ಯರ ಸಭೆ ಪೊಸಳ್ಳಿಯ ಕುಲಾಲ ಸಮುದಾಯ ಭವನಯಲ್ಲಿ ಭಾನುವಾರ ನಡೆಯಿತು.
ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಕೃಷ್ಣಪ್ಪ ಬಿ. ಆಧ್ಯಕ್ಷತೆ ವಹಿಸಿ ಮಾತನಾಡಿ ಯುವಕರು ಸಂಘಟನೆಯಲ್ಲಿ ಪಾಲ್ಗೊಂಡರೆ ಸಂಘಟನೆಗೆ ಬಲ ಬರುತ್ತದೆ. ಅದೇ ರೀತಿ ಕುಲಾಲ ಸೇವಾದಳದಿಂದ ಕುಲಾಲ ಸಮಾಜದವರನ್ನು ಒಗ್ಗೂಡುವ ಕಲಸ ಮಾಡಿರುವುದರಿಂದ ಬಂಟ್ವಾಳ ಕುಲಾಲ ಸಂಘಕ್ಕೊಂದು ಬಲ ಬಂದಂತಾಗಿದೆ ಎಂದು ತಿಳಿಸಿದರು.
ಕಾರ್ಯಕಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಸಂಚಯಗಿರಿ ಮಾತನಾಡಿ ಕಳೆದೆರಡು ವರ್ಷಗಳಿಂದ ಕುಲಾಲ ಸೇವಾದಳದ ಕುಲಾಲ ಸಮಾಜ ಬಾಂಧವರಿಗಾಗಿ ನಡೆಸಿಕೊಂಡು ಬಂದ ಚೈತನ್ಯ ನಿರಂತರ ಕಾರ್ಯಕ್ರಮವನ್ನು ಮುಂದೆಯೂ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬನ್ನಿ. ಇನ್ನು ಮುಂದೆಯೂ ಸಮಾಜ ಸಂಘಟನೆಗಾಗಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭ ನೂತನ ದಳಪತಿ ಗಣೇಶ್ ಕುಲಾಲ್ ಬೆದ್ರಗುಡ್ಡೆ, ಕಾರ್ಯದರ್ಶಿ ಚಂದ್ರಶೇಖರ ಕಾಮಾಜೆಯವರಿಗೆ ವರದಿ ಪುಸ್ತಕ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಕೋಶಾಧಿಕಾರಿ ಸೋಮನಾಥ ಸಾಲ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯ ಲಕ್ಷ್ಮಣ ಅಗ್ರಬೈಲು ಉಪಸ್ಥಿತರಿದ್ದರು.
ಕುಲಾಲ ಸೇವಾದಳದ ಕಾರ್ಯದರ್ಶಿ ಜಯಂತ ಅಗ್ರಬೈಲು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ದಳಪತಿ ರಾಜೇಶ್ ಕುಮಾರ್ ರಾಯಿ ಪ್ರಾಸ್ತಾವಿಕವಾಗಿ ಮಾಡನಾಡಿದರು. ತಾರನಾಥ ಮೊಡಂಕಾಪು, ರಾಘವೇಂದ್ರ ಮೊಡಂಕಾಪು, ಪ್ರೇಮನಾಥ ನೇರಂಬೋಳು, ದರ್ಶನ್ ಮೊಡಂಕಾಪು ಕಾರ್ಯಕ್ರಮಕ್ಕೆ ಸಹಕರಿಸಿದ್ದರು.

