ಮಂಗಳೂರು: ಅತ್ತಾವರ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ದಲ್ಲಿ ಪುನರ್ ಪ್ರತಿಷ್ಠ ಬ್ರಹ್ಮ ಕಲಶಾಭಿಷೇಕ ವಿಜ್ಞಾಪನ ಪತ್ರ ಬಿಡುಗಡೆ

0 0
Read Time:1 Minute, 59 Second

ಮಂಗಳೂರು: ನೂರಾರು ವರ್ಷಗಳ ಇತಿಹಾಸವುಳ್ಳ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬ್ರಹ್ಮಕಲಶಾಭಿಷೇಕ ಎಪ್ರಿಲ್ 23 ರಂದು ನಡೆಯಲಿದೆ.

ಇದರ ಪ್ರಯುಕ್ತ ವಿಜ್ಞಾಪನಾ ಪತ್ರ ಬಿಡುಗಡೆ ಫೆಬ್ರವರಿ 22ರಂದು ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ, ಅತ್ತಾವರದಲ್ಲಿ ನಡೆಯಿತು.

ಚಕ್ರಪಾಣಿ ಗೋಪಿನಾಥ ದೇವಸ್ಥಾನ ಅತ್ತಾವರ ಇಲ್ಲಿಯ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಭಟ್ ಆಶೀರ್ವಚನ ನೀಡಿ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಅಯ್ಯಪ್ಪ ದೇವಸ್ಥಾನ ಇದಾಗಿದ್ದು ಇದರ ಬ್ರಹ್ಮಕಲಶಾಭಿಷೇಕ ಶುಭಕಾರ್ಯ ಒದಗಿರುವುದು ನಮ್ಮೆಲ್ಲರ ಭಾಗ್ಯ. ಈ ದೇವತಾ ಕಾರ್ಯದಲ್ಲಿ ಅಯ್ಯಪ್ಪ ಭಕ್ತ ಅಭಿಮಾನಿಗಳು ಊರಾ ಹಾಗೂ ಪರ ಊರ ಭಕ್ತಾ ಅಭಿಮಾನಿಗಳು ಎಲ್ಲರೂ ಒಟ್ಟಿಗೆ ಸೇರಿ ದೇವತಾ ಕಾರ್ಯದಲ್ಲಿ ಕೈಜೋಡಿಸೋಣ ಎಂದರು.

ಮುಖ್ಯ ಅತಿಥಿಗಳಾಗಿ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ಆಡಳಿತ ಮಂಡಳಿಯ ಧರ್ಮಣ್ಣ ನಾಯ್ಕ್, ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ರತೀಂದ್ರನಾಥ್, ಬ್ರಹ್ಮ ಕಲಶದ ಅಧ್ಯಕ್ಷರಾದ ಸೂರಜ್ ರಾಘವನ್, ಕಾರ್ಯಾಧ್ಯಕ್ಷರಾದ ಗೋಕುಲದಾಸ್ ಮತ್ತು ಮುರಳೀಧರ್ , ಗೌರವ ಕೋಶಾಧಿಕಾರಿ ಸಂತೋಷ್ ಶೆಟ್ಟಿ, ಹಾಗೂ ಧಾರ್ಮಿಕ ಕ್ಷೇತ್ರದ ಮುಂದಾಳು ಮೋಹನ್ ಪೂಜಾರಿ, ಮೇಲಿನ ಮೊಗರು ಅಯ್ಯಪ್ಪ ದೇವಸ್ಥಾನ ಪಡೀಲ್ ಇದರ ಅಧ್ಯಕ್ಷರಾದ ಮೋಹನ ಪಡೀಲ್ , ಅಯ್ಯಪ್ಪ ಸೇವಾ ಸಮಿತಿಯ ಕ್ಷಿತಿ ಮಮ್ಲೂರು , ಉಪಸ್ಥಿತರಿದ್ದರು . ಈ ವೇಳೆ ಸ್ಥಳೀಯ ಹಲವಾರು ಸಂಘ ಸಂಸ್ಥೆಗಳ ಕಾರ್ಯಕರ್ತರು ಮುಖಂಡರು,ಊರಿನ ನಾಗರಿಕರು ಈ ವೇಳೆ ಉಪಸ್ಥಿತರಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *