ರಸ್ತೆಯಲ್ಲಿ ಹಠಾತ್ ಅಡ್ಡ ಬಂದ ನಾಯಿ: ಸ್ಕೂಟರ್ ನಲ್ಲಿದ್ದ ಮಹಿಳೆ ಸಾವು

0 0
Read Time:1 Minute, 3 Second

ಉಡುಪಿ: ರಸ್ತೆಯಲ್ಲಿ ಹಠಾತ್ ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಮಹಿಳೆ ಕೆಳಗೆ ಬಿದ್ದು ಗಾಯಗೊಂಡು ಮೃತಪಟ್ಟಿದ್ದಾರೆ.

ಬ್ರಹ್ಮಾವರ ಕಾಡೂರು ಗ್ರಾಮದ ದುರ್ಗಾಪರಮೇಶ್ವರಿ ದೇವಾಲಯದ ಬಳಿ ಘಟನೆ ನಡೆದಿದೆ. ನಾಯಿ ಅಡ್ಡ ಬಂದಿದ್ದರಿಂದ ಸ್ಕೂಟರ್ ಬ್ರೇಕ್ ಹಾಕಲಾಗಿದೆ.

ಈ ವೇಳೆ ಹಿಂಬದಿ ಕುಳಿತಿದ್ದ ಸುಮತಿ ಶೆಟ್ಟಿ ಅವರು ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ಪತಿ ಕರುಣಾಕರ ಶೆಟ್ಟಿ ಸ್ಕೂಟರ್ ಚಾಲನೆ ಮಾಡುತ್ತಿದ್ದರು. ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸುಮತಿ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಈ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *