
Read Time:1 Minute, 6 Second
ಮಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ರಾಜೀವ್ ಗೌಡ ಬಂಧಿಸಲಾಗಿದೆ. ಈ ಬೆನ್ನಲ್ಲೇ ಅವರು ತಲೆ ಮರೆಸಿಕೊಳ್ಳೋದಕ್ಕೆ ಸಹಾಯ ಮಾಡಿದ ಆರೋಪದಡಿ ಮಂಗಳೂರಿನ ಉದ್ಯಮಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.



ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರಿಗೆ ತಲೆ ಮರೆಸಿಕೊಳ್ಳೋದಕ್ಕೆ ಸಹಾಯ ಮಾಡಿದ ಆರೋಪದಡಿ ಉದ್ಯಮಿ ಮೈಕಲ್ ಜೊಸೇಫ್ ರೆಗೋ ಅವರನ್ನು ಬಂಧಿಸಲಾಗಿದೆ. ಪಚ್ಚನಾಡಿ ಬಳಿಯ ಈತನಿಗೆ ಸೇರಿದ್ದ ಜೆ.ಕೆ ಫಾರ್ಮ್ ಹೌಸ್ ನಲ್ಲಿ ರಾಜೀವ್ ಗೌಡ ಅವರನ್ನು ತಲೆಮರೆಸಿಕೊಳ್ಳೋದಕ್ಕೆ ನೆರವಾಗಿದ್ದರು.
ಇದಲ್ಲದೇ ಮಂಗಳೂರಿನ ರೈಲ್ವೆ ಜಂಕ್ಷನ್ ನಲ್ಲಿಯೇ ತಮ್ಮ ಕಾರು ಬಿಟ್ಟು ಮೈಕಲ್ ಕಾರಿನಲ್ಲಿ ಕೇರಳಕ್ಕೆ ತೆರಳಿದ್ದರು. ಹೀಗಾಗಿ ಇಬ್ಬರನ್ನು ಕೇರಳದಲ್ಲಿ ಪೊಲೀಸರು ಬಂಧಿಸಿದ್ದಾರೆ.



