
ಸರ್ವಜ್ಞ ಜಯಂತಿಯನ್ನ ಅಖಿಲ ಭಾರತ ಕುಂಬಾರರ ಮಹಾಸಭಾ ದ ರಾಜ್ಯವ್ಯಾಪಿ ನಾಯಕರುಗಳ ಶ್ರಮ ಮತ್ತು ಹೋರಾಟದಿಂದ ಪಡೆಯಲಾಗಿದ್ದು. ಫೆಬ್ರವರಿ 20 ರಂದು ರಾಜ್ಯವ್ಯಾಪಿ ಪ್ರತೀ ಜಿಲ್ಲೆ ತಾಲೂಕು ಹೋಬಳಿ ಗಳಲ್ಲಿ ಸರ್ವಜ್ಞ ಜಯಂತಿ ಆಚರಿಸಲು ಭರದಿಂದ ತಯಾರಿ ನಡೆದಿದ್ದು.




ರಾಜಧಾನಿ ಸಹಿತ ವಿವಿಧ ಜಿಲ್ಲೆಗಳಲ್ಲಿ ಮಹಾಸಭಾ ,ಯುವ ವೇದಿಕೆ ,ಕುಂಭ ವೈದ್ಯಕೂಟ, ಕುಂಬಾರ ಎಂಜಿನಿಯರ್ಸ್ ಕೂಟ, ಕುಂಬಾರರ ಸರಕಾರಿ ನೌಕರರ ಸಂಘ, ಕುಂಬಾರರ ಮಹಿಳಾ ಒಕ್ಕೂಟ, ವಿವಿಧ ಸ್ವತಂತ್ರ ಕುಲಾಲ ಕುಂಬಾರ ಶಾಲಿವಾಹನ ಪ್ರಜಾಪತಿ ಸಂಘಗಳು ತಯಾರಿ ನಡೆಸುತ್ತಿದ್ದು ಅಂದೇ ಏಕಕಾಲದಲ್ಲಿ ರಾಜಕೀಯದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹಕ್ಕೊತ್ತಾಯ ಮಾಡಲಿವೆ.

ಈಗಾಗಲೇ ಕುಂದಾಪುರದಲ್ಲಿ, ಮಂಗಳೂರಲ್ಲಿ, ಮೈಸೂರಲ್ಲಿ, ಅರ್ಹ ಕುಂಬಾರ ಸಮುದಾಯದ ರಾಜಕೀಯ ನಾಯಕರುಗಳಿಗೆ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ನಾಮನಿರ್ದೇಶನ ಮಾಡುವಂತೆ ಹಕ್ಕೊತ್ತಾಯ ಮಾಡಲಾಗಿದ್ದು, ಬೆಂಗಳೂರಿನ ಕುಂಭ ವೈದ್ಯಕೂಟದ ದಶ ಮಾನೋತ್ಸವ ಸಂಭ್ರಮದಲ್ಲಿ, ಬೆಂಗಳೂರು ಕುಲಾಲ ಸಂಘದ 55 ನೇ ಮಹಾಸಭೆ ಯಲ್ಲಿ, ಉಡುಪಿಜಿಲ್ಲೆಯ ಕಾಪುವಿನಲ್ಲಿ ಜರುಗಿದ ಕುಲಾಲ ಕ್ರೀಡೋತ್ಸವದಲ್ಲಿ ಮತ್ತೆ ಕುಂಬಾರರಿಗೆ ರಾಜಕೀಯ ಸ್ಥಾನ ಮಾನದ ಬಗ್ಗೆ ಹಕ್ಕೊತ್ತಾಯ ಮಾಡಲಾಗಿದೆ.



ಈ ಹಕ್ಕೊತ್ತಾಯ ಫೆಬ್ರವರಿ 20 ರ ಸರ್ವಜ್ಞ ಜಯಂತಿಯಂದು ರಾಜ್ಯವ್ಯಾಪಿ ಕಾವು ಪಡೆದು ಕೊಳ್ಳಲಿದೆ, ಆ ಬಳಿಕ ಬೆಂಗಳೂರು ಅಥವಾ ಮೈಸೂರಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳನ್ನ ಕರೆಸಿ ಅವರ ಸಮ್ಮುಖ ದಲ್ಲಿ ಬ್ರಹತ್ ಹಕ್ಕೊತ್ತಾಯ ಸಮ್ಮೇಳನ ಮಾಡಲಾಗುವುದು ಅಂತ ಅಖಿಲ ಭಾರತ ಕುಂಬಾರರ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಿವಕುಮಾರ ಚೌಡ ಶೆಟ್ಟಿ ತಿಳಿಸಿದ್ದಾರೆ.



