
Read Time:1 Minute, 14 Second
ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ
ಕನ್ಯಾನ ಗ್ರಾಮದಲ್ಲಿ ಬೆಂಕಿಗೆ ಅಹುತಿಯಾಗಿ ಮನೆ ನಷ್ಟಗೊಂಡ ಕುಟುಂಬದವರಿಗೆ ಜಾಗ ಮತ್ತು ಮನೆ ಖರೀದಿಗೆ ಈಗಾಗಲೇ ಸಮಾಜದ ಬಂದುಗಳಲ್ಲಿ ವಿನಂತಿ ಮಾಡಿ ಬಂದಿರುವ ನಗದು ಹಾಗೂ ಕುಟುಂಬದವರಿಂದ ಸಂಗ್ರಹಣೆ ಆಗಿರುವ ಹಣವನ್ನು ಒಟ್ಟು ಸೇರಿಸಿ ₹. 1’64, 000 ( ಒಂದು ಲಕ್ಷ ಅರುವತ್ತ ನಾಲ್ಕು ಸಾವಿರ ) ಮೊತ್ತವನ್ನು ಸೂಕ್ತ ಕರಾರು ಪತ್ರವನ್ನು ಮಾಡಿ. ಜಾಗ ಮತ್ತು ಮನೆ ಮಾಲೀಕ ರಾದ ಅದ್ರಮ್ ಸಾಹೇಬ. ಫಾತಿಮಾ ಬಿ. ಅವರಿಗೆ ಮುಂಗಡ ಹಣವಾಗಿ ನಿನ್ನೆ ಕುಲಾಲ ಕುಂಬಾರ ಯುವ ವೇದಿಕೆಯ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಲಯನ್ ಅನಿಲ್ ದಾಸ್ ಹಸ್ತಾಂತರಿಸಿ ಅತಿ ಶೀಘ್ರದಲ್ಲಿ ಬಾಕಿ 3 ಲಕ್ಷ ರೂಪಾಯಿಯನ್ನು ಸಂಗ್ರಹಿಸಿ ನೀಡುವುದಾಗಿ ಭರವಸೆ ನೀಡಿದರು.ಈ ಸಮಯದಲ್ಲಿ ಮಹೇಶ್ ಆರ್ತಿ ಮೂಲೆ ಹಾಗೂ ಗುಣವತಿ ಮೋಕ್ಷಿತ್, ಲತೇಶ್ ಉಪಸ್ಥಿತರಿದ್ದರು.




