
Read Time:1 Minute, 4 Second
ಉಡುಪಿ : ರಾಷ್ಟ್ರೀಯ ಹೆದ್ದಾರಿ ಉಪ್ಪೂರು ಕೆ.ಜಿ ರೋಡ್ ಬಳಿ ಬೈಕ್ ಸವಾರ ಹದಿನಾಲ್ಕು ಚಕ್ರಗಳ ಟ್ರಕ್ಕಿನ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಸಾವನಪ್ಪಿದ ಭೀಕರ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.



ಚಕ್ರದಡಿ ಸಿಲುಕಿದ ಬೈಕ್ ಸವಾರನ ದೇಹವು ಛಿದ್ರಗೊಂಡಿದ್ದು, ದೇಹದಿಂದ ರುಂಡ ಬೆರ್ಪಟ್ಟು ಚಕ್ರದಡಿ ಸಿಲುಕಿಕೊಂಡಿರುವ ಭೀಕರ ದೃಶ್ಯವು ಮನಕಲಕುವಂತಿತ್ತು. ಮೃತ ಸವಾರ ಬ್ರಹ್ಮವಾರ ಮಟಪಾಡಿಯ ನಿವಾಸಿ ಎಂದು ತಿಳಿದುಬಂದಿದೆ.
ಘಟನಾ ಸ್ಥಳದಲ್ಲಿದ್ದು ಬ್ರಹ್ಮಾವರ ಆರಕ್ಷಕ ಠಾಣೆಯ ಮುಖ್ಯ ಆರಕ್ಷಕ ಮಹಾಲಿಂಗ ಮಹಜರು ಪ್ರಕ್ರಿಯೆ ನಡೆಸಿದರು. ಶವತೆರವು ಹಾಗೂ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು, ಮತ್ತು ಬ್ರಹ್ಮಾವರದ ಅಂಬುಲೆನ್ಸ್ ಚಾಲಕ ನೆರವಾದರು.



