
ಹರಿವು ಬುಕ್ಸ್ ಪ್ರಕಾಶನದ ಮೂಲಕ, ಮೊದಲ ಆವೃತ್ತಿಯಲ್ಲೇ ಅಭೂತಪೂರ್ವ ಯಶಸ್ಸು ಕಂಡು ಮರುಮದ್ರಣಗಳಾದ ನಿಮ್ಮ ಪ್ರೀತಿಯ ‘ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ’ ಪುಸ್ತಕದ ಎರಡನೇ ಆವೃತ್ತಿ ಜನವರಿ 24ರಂದು ಲೋಕಾರ್ಪಣೆಗೊಳ್ಳಲಿವೆ. ಈ ಎರಡನೇ ಆವೃತ್ತಿಯ 80 ಕ್ಕೂ ಮಿಗಿಲಾದ ವೈದ್ಯರು ಹಂಚಿಕೊಂಡಿರುವ ತಮ್ಮ ವೈದ್ಯಲೋಕದ ಕಷ್ಟ, ಸುಖ, ದುಃಖ, ನೋವು, ನಲಿವು, ಜೀವನಗಳಂತಹ ರೋಚಕಾನುಭವಗಳಿಗೆ ನಿಮ್ಮನ್ನು ಕೊಂಡೊಯ್ಯಲಿದೆ. ಈ ಪುಸ್ತಕ ಭಾರತೀಯ ವೈದ್ಯಕೀಯ ಸಂಘದ ಮತ್ತು ರಾಜ್ಯ ಕನ್ನಡ ವೈದ್ಯ ಬರಹಗಾರರ ಸಮಿತಿ, ಕರ್ನಾಟಕದ ಹೆಮ್ಮೆಯ ಕೊಡುಗೆ




ಈ ಪುಸ್ತಕದ ಸಂಪಾದಕ ಮಂಡಳಿ:
ಡಾ. ಸರೋಜಾ ಆರ್ ಕೆ. ಡಾ. ಶಿವಾನಂದ ಕುಬಸದ್, ಡಾ. ಅರವಿಂದ ಪಟೇಲ್, ಡಾ. ನಾ ಸೋಮೇಶ್ವರ, ಡಾ. ಶಾಂತಲಾ, ಡಾ. ಸಲೀಂ.
ಡಾ. ಶಿವರಾಜ್ ಪಾಟೀಲ್, ಡಾ. ಮೋಹನ್ ಎಚ್ ಎಸ್


ಈ ಪುಸ್ತಕದ ಪ್ರಧಾನ ಸಂಪಾದಕರು
ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು

ಭಾರತೀಯ ವೈದ್ಯಕೀಯ ಸಂಘ (IMA) ಕರ್ನಾಟಕ ರಾಜ್ಯ ಶಾಖೆಯ ಕನ್ನಡ ವೈದ್ಯ ಬರಹಗಾರರ ಬಳಗ’ವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. 2026ರ ಜನವರಿ 24ರಂದು IMA ಸಭಾಂಗಣ, ಅಲೂರು ವೆಂಕಟರಾವ್ ರಸ್ತೆ, ಮಿಂಟೋ ಕಣ್ಣಾಸ್ಪತ್ರೆ ಬಳಿ. ಚಾಮರಾಜಪೇಟೆ, ಬೆಂಗಳೂರು ಇಲ್ಲಿ ಬೆಳಿಗ್ಗೆ 11:00 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ `ಸಿರಿಂಜ್ ಹಿಡಿಯುವ ಕೈ ಪೆನ್ನು ಹಿಡಿದಾಗ ಆವೃತ್ತಿ 2″ ಪುಸ್ತಕ ಬಿಡುಗಡೆಯಾಗಲಿದೆ.


