ಉದಯನಿಧಿ ಸ್ಟಾಲಿನ್‌ನ ಹಿಂದೂ ವಿರೋಧಿ ಹೇಳಿಕೆಗಳು ದ್ವೇಷ ಭಾಷಣಕ್ಕೆ ‌ಸಮ: ಹೈಕೋರ್ಟ್

0 0
Read Time:3 Minute, 21 Second

ಚೆನ್ನೈ: ತಮಿಳುನಾಡಿನ ಉಪಮುಖ್ಯಮಂತ್ರಿ ಉದಯ ನಿಧಿ ಸ್ಟಾಲಿನ್ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ದ್ವೇಷ ಭಾಷಣಕ್ಕೆ ‌ಸಮಾನವಾದವು ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಹೈಕೋರ್ಟಿನ ಮಧುರೈ ಪೀಠವು ಕಠಿಣ ಪದಗಳಲ್ಲಿ ಅವಲೋಕನ ಮಾಡಿದ್ದು, ಡಿಎಂಕೆಯಿಂದ ನೂರು ವರ್ಷಗಳಲ್ಲಿ ಹಿಂದೂ ಧರ್ಮದ ಮೇಲೆ ಸ್ಪಷ್ಟ ದಾಳಿ ನಡೆದಿದೆ. ಅದೇ ಸೈದ್ಧಾಂತಿಕ ವಂಶಕ್ಕೆ ಉದಯ ನಿಧಿ ಸೇರಿದವರು ಎಂದು ಹೇಳಿದೆ. ಜೊತೆಗೆ ದ್ವೇಷ ಭಾಷಣ ಆರಂಭಿಸಿದವರು ಶಿಕ್ಷೆಗೆ ಒಳಗಾಗದೆ ಉಳಿಯುತ್ತಾರೆ ಎನ್ನುವ ಕಳವಳವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.

ಕಳೆದ 100 ವರ್ಷಗಳಿಂದ ದ್ರಾವಿಡ ಕಳಗಂ ಮತ್ತು ತರುವಾಯ ದ್ರಾವಿಡ ಮುನ್ನೇತ್ರ ಕಳಗಂ ಹಿಂದೂ ಧರ್ಮದ ಮೇಲೆ ಸ್ಪಷ್ಟವಾದ ದಾಳಿ ನಡೆಸಿದೆ ಎಂಬುದು ಸ್ಪಷ್ಟವಾಗಿದೆ, ಸಚಿವರು ಆ ಗುಂಪಿಗೆ ಸೇರಿದವರು. ಒಟ್ಟಾರೆ ಸಂದರ್ಭಗಳನ್ನು ಪರಿಗಣಿಸಿದಾಗ, ಅರ್ಜಿದಾರರು ಸಚಿವರ ಭಾಷಣದ ಗುಪ್ತ ಅರ್ಥವನ್ನು ಪ್ರಶ್ನಿಸಿದ್ದಾರೆ ಎಂದು ಕಂಡುಬರುತ್ತದೆ” ಎಂದು ಹೈಕೋರ್ಟ್ ಹೇಳಿದೆ.

ತಮಿಳುನಾಡಿನಲ್ಲಿ ಸಚಿವರ ವಿರುದ್ಧ ದ್ವೇಷ ಭಾಷಣಕ್ಕಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ, ಆದರೆ ಇತರ ರಾಜ್ಯಗಳಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ ಎಂದು ಹೈಕೋರ್ಟ್ ಹೇಳಿದೆ. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅವುಗಳನ್ನು ನಾಶ ಮಾಡಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ, ಕರೋನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ, ನಾವು ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು” ಎಂದು ಉದಯನಿಧಿ ಹೇಳಿಕೆ ನೀಡಿದ್ದರು. ಹೇಳಿಕೆ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ದೇಶಾದ್ಯಂತ ವಿವಾದ ಭುಗಿಲೆದ್ದ ಬಳಿಕವೂ, ಉದಯನಿಧಿ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡು ನಾನು ದೃಢವಾಗಿ ನಿಲ್ಲುತ್ತೇನೆ. ನನ್ನ ಹೇಳಿಕೆಗಳು ಸನಾತನ ಧರ್ಮವನ್ನು ಅನುಸರಿಸುವ ಜನರ ನರಮೇಧಕ್ಕೆ ಕರೆ ನೀಡುತ್ತಿಲ್ಲ ಎಂದು ಹೇಳಿದ್ದರು.

ಜನವರಿ 2025 ರಲ್ಲಿಸನಾತನ ಧರ್ಮ ವಿರೋಧಿ ಹೇಳಿಕೆಗಳಿಗೆ ಸಂಬಂಧಿಸಿದಂತೆ ಉದಯನಿಧಿ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಮೂರು ರಿಟ್ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.

ಈ ವರ್ಷದ ಮೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ವಾತಾವರಣ ಈಗಾಗಲೇ ಕಾವೇರುತ್ತಿರುವ ಸಂದರ್ಭದಲ್ಲಿ ಉದಯನಿಧಿ ಸ್ಟಾಲಿನ್‌ಗೆ ಹೈಕೋರ್ಟ್ ತಪರಾಕಿ ನೀಡಿದೆ.ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟಕ್ಕೆ ಟೀಕಿಸಲು ಈಗ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *