
Read Time:1 Minute, 21 Second
ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಇನ್ಮುಂದೆ ಭೇಟಿ ಕೊಡುವಾಗ ಸಾಂಪ್ರದಾಯಿಕ ಕೊಡುಗೆಯಲ್ಲಿ ಬರಬೇಕು ಎಂದು ಉಡುಪಿ ಶ್ರೀ ಕೃಷ್ಣ ಮಠ ಇದೀಗ ವಸ್ತ್ರ ಸಂಹಿತೆ ಜಾರಿ ಮಾಡಿದೆ. ಹೌದು ಇನ್ಮುಂದೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಬರೋರು ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು ಎಂದು ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ.



ಶೀರೂರು ಮಠದ ನೂತನ ಪರ್ಯಾಯ ಸ್ವಾಮಿಗಳು ಈ ಸೂಚನೆ ಹೊರಡಿಸಿದ್ದಾರೆ. ಪುರುಷರು ಅಂಗಿ, ಬನಿಯನ್, ಬರ್ಮುಡಾ ಹಾಗೂ ಟೈಟ್ ವಸ್ತ್ರಗಳನ್ನು ಧರಿಸಿ ಪ್ರವೇಶಿಸುವಂತಿಲ್ಲ. ಇನ್ನೂ ಮಹಿಳೆಯರು ಶಾರ್ಟ್ಸ್, ಟೈಟ್ ಪ್ಯಾಂಟ್ ಧರಿಸಿಕೊಂಡು ಬರುವಂತಿಲ್ಲ. ಶ್ರೀಕೃಷ್ಣನ ದರ್ಶನಕ್ಕೆ ಬರುವವರು ಸಾಂಪ್ರದಾಯಿಕ ಉಡುಗೆಯಲ್ಲಿರಬೇಕು.
ಮಾಡರ್ನ್ ಡ್ರೆಸ್ ಹಾಕೊಂಡು ಬಂದ್ರೆ ದರ್ಶನಕ್ಕೆ ಅವಕಾಶವಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಕೊಲ್ಲೂರು, ಧರ್ಮಸ್ಥಳ ಹಾಗೂ ಕಟೀಲು ಬಳಿಕ ಅದೇ ರೀತಿಯಲ್ಲಿ ಇದೀಗ ಉಡುಪಿ ಶ್ರೀಕೃಷ್ಣ ಮಠದಲ್ಲಿ ವಸ್ತ್ರಸಂಹಿತೆ ಜಾರಿತರಲಾಗಿದೆ.



