
Read Time:1 Minute, 19 Second
ಬೆಂಗಳೂರು: ನಟಿ ರನ್ಯಾ ರಾವ್ ಅವರ ತಂದೆ, ಡಿಜಿಪಿ ಡಾ.ರಾಮಚಂದ್ರ ರಾವ್ ಅವರು ಸಮವಸ್ತ್ರದಲ್ಲೇ ರಾಸಲೀಲೆಯಾಡಿದಂತ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



ಶಾಕಿಂಗ್ ಎನ್ನುವಂತೆ ಡಿಜಿಪಿ ಡಾ.ರಾಮಚಂದ್ರ ರಾವ್ ಅವರು ತಮ್ಮ ಡಿಜಿಪಿ ಕಚೇರಿಯಲ್ಲೇ ಸಮವಸ್ತ್ರದಲ್ಲಿ ಮಹಿಳೆಯರೊಂದಿಗೆ ರಾಸಲೀಲೆ ಆಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ವೈರಲ್ ಆಗಿರುವಂತ ವೀಡಿಯೋಗಳಲ್ಲಿ ಡಿಜಿಪಿ ಡಾ.ರಾಮಚಂದ್ರರಾವ್ ಅವರು ತಮ್ಮ ಕಚೇರಿಯಲ್ಲೇ ಕುಳಿತು, ಸಮವಸ್ತ್ರದಲ್ ಹಲವು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರೋದನ್ನು ಕಾಣಬಹುದಾಗಿದೆ. ಹೀಗೆ ಪ್ರಸಿದ್ಧ ಮಾಡೆಲ್ ಒಬ್ಬರ ಜೊತೆಗೆ ಡಿಜಿಪಿ ಡಾ.ರಾಮಚಂದ್ರರಾವ್ ಸರಸ ಆಡುವಂತ ವೀಡಿಯೋ ಮಾಡಿಕೊಂಡಿದ್ದಾರೆ.


ಡಿಜಿಪಿ ಕಚೇರಿಯಲ್ಲೇ ರಾಸಲೀಲೆಯನ್ನು ಡಾ.ರಾಮಚಂದ್ರ ರಾವ್ ಆಡಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸೂಕ್ತ ಕ್ರಮಕ್ಕೂ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.


