
ಕುಲಾಲ ಸಂಘ ಸಿದ್ದಕಟ್ಟೆ ಗಾಡಿ ಪಲ್ಕೆ ಇದರ 21 ನೇ ವಾರ್ಷಿಕೋತ್ಸವದ ಕಾರ್ಯಕ್ರಮವು ಸಂಘದ ಸ್ವಂತ ನೀವೇಶನ ದಲ್ಲಿ ಆದಿತ್ಯವಾರ ನಡೆಯಿತು.



ಕಾರ್ಯಕ್ರಮವನ್ನು ಕುಂಬಾರ ಗುಡಿ ಕೈಗಾರಿಕೆ ಸಹಕಾರ ಸಂಘ ಪುತ್ತೂರು ಇದರ ಅಧ್ಯಕ್ಷ ರಾದ. ಶ್ರೀ ಭಾಸ್ಕರ್ ಎಂ ಪೆರುವಾಯಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಮುಖ್ಯ ಅತಿಥಿಯಾಗಿ ಕುಲಾಲ ಕುಂಬಾರ ಯುವದಿಕೆಯ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಇದರ ಜಿಲ್ಲಾಧ್ಯಕ್ಷರಾದ ಲಯನ್ ಅನಿಲ್ ದಾಸ್ ಮಾತಾಡಿ ಇಂದಿನ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಸಂಘ ಸಂಘಗಳ ನಡುವೆ ಬಾಂಧವ್ಯ ಒಡನಾಟ ಹಾಗೂ ಸಂಘಟನಾತ್ಮಕ ಒಗ್ಗೂಡುಕೆಯಿಂದ ಸಮುದಾಯದಲ್ಲಿ ಇನ್ನಷ್ಟು ಬದಲಾವಣೆ ಹಾಗೂ ಬಲಿಷ್ಠತೆಯನ್ನು ತರಬಹುದೆಂದು ಉಲ್ಲೇಖಿಸಿದರು.


ಮತ್ತು ಕುಂಭ ಕಲಾವಳಿ ಕಾರ್ಯಕ್ರಮ ದಲ್ಲಿ ಸಿದ್ದ ಕಟ್ಟೆ ಕುಲಾಲ ಸಂಘದ ವಿಶೇಷ ಪ್ರೋತ್ಸಾಹ ಮತ್ತು ಭಾಗವಹಿಸಿಕೆಯನ್ನು ಕೊಂಡಾಡಿದರು. ಅತಿಥಿಗಳಾದ ಉದ್ಯಮಿ ಗೌತಮ್ ಜಿ ಕುಲಾಲ್, ಉಪಾಧ್ಯಕ್ಷರಾದ ಚಿತ್ರ ಹಾಗೂ ಕುಲಾಲ ಸಂಘ ಸಿದ್ದಕಟ್ಟೆ ಇದರ ಅಧ್ಯಕ್ಷರಾದ ಮನೋಜ್ ಕುಲಾಲ್ ಉಪಸ್ಥಿತರಿದ್ದರು.


ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡಾಪಟುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಕುಲಾಲ ಕುಂಬಾರ ಯುವ ವೇದಿಕೆಯ ವಿಭಾಗೀಯ ಅಧ್ಯಕ್ಷ ಶ್ರೀ ಸುಕುಮಾರ್ ಬಂಟುವಾಳ, ಶ್ರೀ ಹೊನ್ನಯ ಕಾಟಿಪಳ್ಳ, ಸೋಮಯ್ಯ ಅನೈನಾಡೆ, ಸುಮೀತ್ ಬಂಟ್ವಾಳ, ಭಾಗವಹಿಸಿದ್ದರು.

