
Read Time:1 Minute, 13 Second
ಮಂಗಳೂರು: ಬೆಂಗಳೂರಿನಲ್ಲಿ ಬಂದೀಖಾನೆ ಡಿಜಿಪಿಯಾಗಿ ಅಲೋಕ್ ಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬಂದಿಖಾನೆ ಭದ್ರತೆಯನ್ನು ಹೆಚ್ಚುಗೊಳಿಸಲಾಗಿದೆ. ಮಂಗಳೂರಿನ ಬಂದೀಖಾನೆಗೂ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿ ತೆರಳಿದ್ದರು.



ಜನವರಿ 14ರಂದು ತಡರಾತ್ರಿ 10.55ರಿಂದ 11.50ರ ನಡುವೆ ಜೈಲು ಅಧೀಕ್ಷಕ ಶರಣಬಸಪ್ಪ ಅವರು ಜೈಲಿನ ಅಧಿಕಾರಿ ಮತ್ತು ಸಿಬಂದಿಯೊಂದಿಗೆ ಕಾರಾಗೃಹದ ಒಳಗಡೆ ತಪಾಸಣೆ ನಡೆಸಿರುವ ವೇಳೆ ‘ಎ’ ವಿಭಾಗದ 3ನೇ ಕೊಠಡಿಯಲ್ಲಿ ಸಿಮ್ ಸಹಿತ ವೀವೋ ಮೊಬೈಲ್ ಫೋನ್, ಕಪ್ಪು ಬಣ್ಣದ ಎಚ್ ಡಿಎಂ ಕೀ ಪ್ಯಾಡ್ ಮೊಬೈಲ್ ಮತ್ತು ಸಿಮ್, ಮೊಬೈಲ್ ಚಾರ್ಜರ್ ಅಡಾಪ್ಟರ್, 2 ಚಾರ್ಜರ್ ಕೇಬಲ್ ಪತ್ತೆಯಾಗಿದೆ.
‘ಬಿ’ ವಿಭಾಗದ 5ನೇ ಕೊಠಡಿಯಲ್ಲಿ ಕಂದು ಬಣ್ಣದ ನೋಕಿಯಾ ಕೀ ಪ್ಯಾಡ್ ಮೊಬೈಲ್ ಸಿಕ್ಕಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಬರ್ಕೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.



