
ವಿಟ್ಲ: ಕನ್ಯಾನ ಗ್ರಾಮದ ಕಡು ಬಡ ಕಟುಂಬ ಹರಿಣಾಕ್ಷಿ ಯವರ ಬಾಡಿಗೆ ಮನೆ ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಯ ಜಿಲ್ಲಾಧ್ಯಕ್ಷರಾದ ಲಯನ್ ಅನಿಲ್ ದಾಸ್ ಮತ್ತು ಅವರ ತಂಡವು ಮಂಗಳವಾರ ಭೇಟಿ ನೀಡಿದರು.
ಹರಿಣಾಕ್ಷಿ ನಾರಾಯಣ ದಂಪತಿಯವರು ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದು, ಇತ್ತೀಚೆಗೆ ಬೆಂಕಿ ಆಕಸ್ಮಿಕದಿಂದಾಗಿ ಆ ಮನೆ ಮತ್ತು ಮನೆಯಲ್ಲಿದ್ದ ಬೆಲೆಬಾಳುವ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದ್ದವು. ಅಷ್ಠೇ ಅಲ್ಲದೇ ಮಗಳ ಮದುವೆ ನಿಗದಿಯಾಗಿತ್ತು. ಬ್ಯಾಂಕ್ ಸಾಲ ಮಾಡಿ ತೆಗೆದ ಚಿನ್ನಾಭರಣ, ಬಟ್ಟೆ, ಕೂಡಿಟ್ಟ ಹಣ ಸಂಪೂರ್ಣ ಸುಟ್ಟು ಹೋಗಿದ್ದವು. ಆದ್ದರಿಂದ ತೀರಾ ಬಡತನದಲ್ಲಿದ್ದ ಕುಟುಂಬವು ದಾನಿಗಳ ಮೊರೆ ಹೋಗಿದ್ದರು. ವಿಷಯ ತಿಳಿದ ಲಯನ್ ಅನಿಲ್ ದಾಸ್ ರವರ ತಂಡವು ಡಿ.30 ರಂದು ಸಂತ್ರಸ್ತರನ್ನು ಭೇಟಿ ಮಾಡಿ
ಅವರ ಸುಟ್ಟು ಕರಕಲಾದ ಮನೆ ಪರಿಸ್ಥಿತಿ ನೋಡಿ ಸ್ಥಳೀಯ ಶಾಸಕರ ಗಮನಕ್ಕೆ ತಂದು ಹಾಗೂ ಪಂಚಾಯತ್ ಅಧ್ಯಕ್ಷ ರ ಗಮನಕ್ಕೆ ತಂದು ಅವರಿಗೆ ಉತ್ತಮ ಪ್ರದೇಶದಲ್ಲಿ ಜಾಗವನ್ನು ಗುರುತಿಸಿ ಅಲ್ಲಿರುವ ಮನೆಯನ್ನು ಪೂರ್ಣ ಪ್ರಮಾನದಲ್ಲಿ ಸಜ್ಜುಗೊಳಿಸಿ ಅವರ ಕುಟುಂಬಕ್ಕೆ ಒದಗಿಸುವಲ್ಲಿ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಲ.ಅನಿಲ್ ದಾಸ್ ಆವರು ತಮ್ಮ ಕುಲಾಲ ಕುಂಬಾರ ಯುವ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಚರ್ಚೆ ನಡೆಸಿ ಮುಂದಿನ ಎಲ್ಲಾ ಕಾರ್ಯಗಳಲ್ಲಿ ಪೂರ್ಣ ಸಹಕಾರ ನೀಡುವುದಾಗಿ ಮತ್ತು ಮನೆ ನಿರ್ಮಾಣ ಮಾಡಲು ಕುಲಾಲ ಕುಂಬಾರ ಯುವ ವೇದಿಕೆ ವತಿಯಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕುಲಾಲ ಕುಂಬಾರ ಯುವ ವೇದಿಕೆ ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.




