
Read Time:1 Minute, 7 Second
ಉಡುಪಿ ಜಿಲ್ಲೆಯ ಪಡುಬಿದ್ರಿ ಹೆಜಮಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನಡೆಯುತ್ತಿದ್ದ ನೇಮೋತ್ಸವದ ವೇಳೆ ವೃದ್ಧೆಯ ಕತ್ತಿನಿಂದ ಚಿನ್ನದ ಸರವನ್ನು ಎಗರಿಸಿದ ಪರಾರಿಯಾಗಿದ್ದ ಮೂವರು ಮಹಿಳೆಯರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.



ತಮಿಳುನಾಡಿನ ನಿವಾಸಿಗಳಾದ ಕಾಳಿಯಮ್ಮ, ಶೀಥಲ್ ಹಾಗೂ ಮಾರಿ ಬಂಧಿತ ಆರೋಪಿಗಳು. ಹೆಜಮಾಡಿಯ ಗರಡಿಯಲ್ಲಿ ನಡೆಯುತ್ತಿದ್ದ ನೇಮೋತ್ಸವದ ವೇಳೆ ಕಮಲ ಎಂಬವರ ಕತ್ತಿನಿಂದ ಸರ ಎಗರಿಸುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿತ್ತು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಿಳೆಯರನ್ನು ಪುತ್ತೂರಿನಲ್ಲಿ ಗುರುತಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪಡುಬಿದ್ರೆ ಪೊಲೀಸರು ಮಹಿಳೆಯರನ್ನು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.



