
ಬೆಂಗಳೂರು : ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ರದ್ದು ವಿಚಾರವಾಗಿ ಸಚಿವ ಕೆ.ಹೆಚ್ ಮುನಿಯಪ್ಪ ಮಾತನಾಡಿ, ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ತಕ್ಷಣವೇ ತಹಶೀಲ್ದಾರ್ ಗಳಿಗೆ ಭೇಟಿ ಮಾಡಿ. ಹೊಸದಾಗಿ ಅರ್ಜಿ ಹಾಕಿದರೆ 15 ದಿನಗಳಿಗೆ ಪಡಿತರ ಕಾರ್ಡ್ ನೀಡುತ್ತೇವೆ ಇನ್ನು ಆಸ್ತಿ ಇರುವವರು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವ ವಿಚಾರವಾಗಿ ಅದನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.



ಬೆಂಗಳೂರಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯಗಳಿಗೆ ಪಡಿತರ ಅಕ್ಕಿ ಕಳ್ಳ ಸಾಗಾಣಿ ವಿಚಾರವಾಗಿ ಈ ಬಗ್ಗೆ ಈಗಾಗಲೇ ಕ್ರಮ ಜರುಗಿಸಿದ್ದೇವೆ ಈಗಾಗಲೇ ವಿವಿಧಡೆ 574 ಜನರನ್ನು ಅರೆಸ್ಟ್ ಮಾಡಲಾಗಿದೆ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ ಇನ್ನು ಮುಂದೆ ಹಾಗೆ ನಡೆಯಲ್ಲ ಎಂದರು.
ಅಲ್ಲದೇ ಇಂದಿರಾ ಕಿಟ್ ವಿಚಾರವಾಗಿ ಮಾತನಾಡಿದ ಅವರು, ಅಕ್ಕಿ ಹೆಚ್ಚಾಯಿತು ಎಂಬ ಭಾವನೆ ಇದೆ ಹಾಗಾಗಿ ಹೊಸ ಯೋಜನೆ ಜಾರಿ ಮಾಡಿದ್ದೇವೆ. ಇಂದಿರಾ ಕಿಟ್ ಅಂತ ಹೊಸ ಯೋಜನೆ ಜಾರಿ ಮಾಡಿದ್ದೇವೆ ಜನವರಿ ಅಥವಾ ಫೆಬ್ರವರಿಯಲ್ಲಿ ಬೇಳೆ, ಸಕ್ಕರೆ ಉಪ್ಪು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.



