
ಮಂಗಳೂರು: ಪ್ರಸಿದ್ಧ ಅಂತರರಾಷ್ಟ್ರೀಯ ಸಲೂನ್ ಬ್ರ್ಯಾಂಡ್ ಟೋನಿ & ಗೈ ಎಸೆನ್ಸುಯಲ್ಸ್, ಡಿಸೆಂಬರ್ 22 ರ ಭಾನುವಾರ ಸಂಜೆ ಕೆಎಫ್‌ಸಿ ಮತ್ತು ವೈನ್ ಗೇಟ್‌ನ ಮೇಲಿರುವ ಉರ್ವಾದ ಅಶೋಕ್ ನಗರದ ಬಿಂಬಿಸ್ ಕಟ್ಟಡದಲ್ಲಿ ತನ್ನ ಐದನೇ ಶಾಖೆಯನ್ನು ಅದ್ಧೂರಿಯಾಗಿ ಉದ್ಘಾಟಿಸುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿತು.




ಹೊಸದಾಗಿ ತೆರೆಯಲಾದ ಟೋನಿ & ಗೈ ಎಸೆನ್ಸುಯಲ್ಸ್ ಉರ್ವಾ ಸ್ಟುಡಿಯೋವನ್ನು ರಿಬ್ಬನ್ ಕತ್ತರಿಸುವ ಸಮಾರಂಭದೊಂದಿಗೆ ಉದ್ಘಾಟಿಸಲಾಯಿತು, ನಂತರ ಗಣ್ಯ ಅತಿಥಿಗಳು ಸಾಂಪ್ರದಾಯಿಕ ದೀಪ ಬೆಳಗಿಸಿದರು.


ಈ ವೇಳೆ ನೂತನ ಮಳಿಗೆಗೆ ಲಯನ್ ಅನಿಲ್ ದಾಸ್ ಭೇಟಿ ನೀಡಿ ಸಂಸ್ಥೆಗೆ ಶುಭ ಹಾರೈಸಿದರು, ನಂತರ ಜ. 4, 2026ರಂದು ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ನಡೆಯಲಿರುವ ಕುಂಭ ಕಲಾವಳಿ ಕುಲಾಲ ಕಲಾ ಸೇವಾಂಜಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಲ.ಅನಿಲ್ ದಾಸ್ ಹಾಗೂ ಸಮಿತಿಯ ಪದಾಧಿಕಾರಿಗಳು ಜೊತೆಯಾಗಿ ಟೋನಿ & ಗೈ ಮಾಲಕರಾದ ಶರತ್ ಕುಲಾಲ್ ಮತ್ತು ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ, ರಶ್ಮಿ ಕುಲಾಲ್, ಕದ್ರಿ ಕ್ರಿಕೆಟರ್ಸ್ ನ ಜಗದೀಶ್ ಕದ್ರಿ, ಕಿರಣ್ ಕುಮಾರ್ ಕೋಡಿಕಲ್, ಸುರೇಶ್ ಕುಲಾಲ್ ಮಂಗಳಾದೇವಿ, ಸಮಾಜ ಸೇವಕ ಈಶ್ವರ್ ಮಲ್ಪೆ, ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಮುಂತಾದವರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು.







