
ವಿಟ್ಲ: ಮನೆಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿ ಸುಟ್ಟು ಬಸ್ಮವಾದ ಘಟನೆ ಕನ್ಯಾನದಲ್ಲಿ ನಡೆದಿದೆ.




ಬೆಂಕಿಯ ಕೆನ್ನಾಲಿಗೆಗೆ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಷಯ ತಿಳಿದ ಸ್ಥಳಿಯರು ಬೆಂಕಿ ನಂದಿಸಲು ಪ್ರಯತ್ನಿಸಿದರು, ನಂತರ ಸ್ಥಳಕ್ಕಾಗಮಿಸಿದ ಬಂಟ್ವಾಳ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಘಟನೆಯ ಸುತ್ತಲೂ ನೀರಿ ಹರಿಸಿ ಬೆಂಕಿ ನಂದಿಸಿದರು.
ಮಗಳ ಮದುವೆ ವಸ್ತ್ರಗಳೂ ಭಸ್ಮ:
ಈ ವೇಳೆಗಾಗಲೇ ಮನೆಯೊಳಗಡೆ ಕಪಾಟಿನಲ್ಲಿ ಇರಿಸಲಾಗಿದ್ದ ಅಗತ್ಯ ದಾಖಲೆಗಳ ಸಹಿತ ಬೆಲೆಬಾಳುವ ಬಟ್ಟೆಬರೆಗಳು ಸುಟ್ಟು ಕರಕಲಾಗಿತ್ತು. ನಾರಾಯಣರವರ ಪುತ್ರಿ ಮಂಗಳೂರಿನಲ್ಲಿ ಕೆಲಸದಲ್ಲಿದ್ದು, ಅವರಿಗೆ ಮದುವೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನಲ್ಲಿ ಸಾಲ ಮಾಡಿ ಚಿನ್ನಾಭರಣ ಹಾಗೂ ಬಟ್ಟೆಬರೆಗಳನ್ನು ಖರೀದಿಸಿದ್ದರು. ಅವುಗಳ ಪೈಕಿ ಬಟ್ಟೆಬರೆಗಳು ಸುಟ್ಟುಹೋಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಾಹಿತಿ ಅರಿತ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದರಾದರೂ ಆ ವೇಳೆಗಾಗಲೇ ಸ್ಥಳೀಯರು ಸೇರಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಘಟನೆಯಿಂದಾಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಬೆಂಕಿ ಹತ್ತಲು ನಿಖರ ಕಾರಣ ತಿಳಿದುಬಂದಿಲ್ಲ.



ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇಖಾ ರಮೇಶ್ ಪಂಜಾಜೆ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಉಳಿದುಕೊಳ್ಳಲು ತಾತ್ಕಾಲಿಕ ಪರಿಹಾರ ನೀಡಿ. ದಿನಸಿ ಸಾಮಗ್ರಿಗಳು ಒದಗಿಸಿ ಮಾನವೀಯತೆ ಮೆರೆದರು


