
ಉಳ್ಳಾಲ: ಕುಲಾಲ ಸಂಘ ಕೊಲ್ಯ ಇದರ ನೂತನ ಅಧ್ಯಕ್ಷ ರಾಗಿ ಲಯನ್ ಅನಿಲ್ ದಾಸ್ ರವರು ಆಯ್ಕೆಯಾಗಿದ್ದಾರೆ.



ಕುಲಾಲ ಸಮಾಜದ ಅಭಿವೃದ್ಧಿ , ಸಂಘಟನೆ ಮೂಲ ಉದ್ದೇಶದೊಂದಿಗೆ ಅವಿರತವಾಗಿ ಶ್ರಮಿಸುತ್ತಿರುವ ಯುವ ಸಂಘಟಕ. ಕೊಡುಗೈ ದಾನಿ. ಸಮಾಜಮುಖಿ ಮನೋಭಾವ ಉಳ್ಳವರು.
ದಾಸ್ ಪ್ರಮೋಷನ್ಸ್ ಹೋಂ ನರ್ಸಿಂಗ್ ಎಂಬ ನರ್ಸಿಂಗ್ ಸೇವಾ ಸಂಸ್ಥೆಯ ಮೂಲಕ ಹಲವಾರು ನಿರುದ್ಯೋಗಿ ಯುವಕ – ಯುವತಿಯರಿಗೆ ಕರ್ನಾಟಕದಾದ್ಯಂತ ಉದ್ಯೋಗ ವನ್ನು ಕಲ್ಪಿಸಿದ್ದಾರೆ .ದಾಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ಹಲವಾರು ಸಮಾಜ ಮುಖಿ ಸೇವೆಗಳನ್ನು ಕಳೆದ 13 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬಂದಿರುತ್ತಾರೆ.

ದಾಸ್ ಓಲ್ಡ್ ಏಜ್ ಹೆಲ್ತ್ ಕೇರ್ ಎಂಬ ವಯೋ ವೃದ್ಧ ರ ಸೇವಾಶ್ರಮ ವನ್ನು ನಡೆಸಿಕೊಂಡು ಹಲವಾರು ವೃದ್ಧರ ಸೇವೆಯನ್ನು ಸಮಾಜದ ಚಿಂತನೆ ಯೊಂದಿಗೆ ಮಿತ ದರದಲ್ಲಿ ಮಾಡಿಕೊಂಡು ಬಂದಿರುತ್ತಾರೆ. ಹಾಗೂ ಲಯನ್ಸ್ ನಲ್ಲಿ ಕಳೆದ 10 ವರ್ಷಗಳಿಂದ ಸಮಾಜಮುಖಿ ಸೇವೆಯಲ್ಲಿ ತನ್ನದೇ ಕೊಡುಗೆಯನ್ನು ನೀಡಿಕೊಂಡು ಬಂದಿರುತ್ತಾರೆ. ಹಾಗೂ ಹತ್ತು ಹಲವಾರು ಸಂಘ ಸಂಸ್ಥೆಗಳಿಗೆ ತನ್ನದೇ ಜವಾಬ್ದಾರಿ ಯೊಂದಿಗೆ ಕೊಡುಗೆ ಸಹಕಾರವನ್ನು ನೀಡುತ್ತಾ ಬಂದಿರುತ್ತಾರೆ.

ಪ್ರಸ್ತುತ ಕುಲಾಲ ಕುಂಬಾರ ಯುವ ವೇದಿಕೆ ಇದರ ಜಿಲ್ಲಾಧ್ಯಕ್ಷರಾಗಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾಗಿ, ಕೊರಗಜ್ಜ ಸೇವಾ ಸಮಿತಿ ಅಂಬಿಕಾ ರೋಡ್ ಇದರ ಅಧ್ಯಕ್ಷ ರಾಗಿ ಹತ್ತು ಹಲವು ಸಂಸ್ಥೆ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ ಇತ್ತೀಚೆಗೆ ಇವರ ಈ ಸೇವೆಗೆ ಕರ್ನಾಟಕ ಸರ್ಕಾರವು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.

