ಜ. 04ರಂದು “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾರ್ಯಕ್ರಮ: ಶ್ರೀ ಚಿದಂಬರ ಬೈಕಂಪಾಡಿ ಅವರು “ಮಾಧ್ಯಮ ಸಿಂಧೂರ” ಪ್ರಶಸ್ತಿಗೆ ಆಯ್ಕೆ

0 0
Read Time:3 Minute, 6 Second

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ) ಮಂಗಳೂರು ಇದರ ಸಹಯೋಗದಲ್ಲಿ “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾಯ೯ಕ್ರಮ ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ಜ. 04ರಂದು ನಡೆಯಲಿದೆ.

ಬೆಳಿಗ್ಗೆ 09 ಗಂಟೆಗೆ ಪದಗ್ರಹಣ ನಡೆಯಲಿದ್ದು, ಬಳಿಕ ಮಧ್ಯಾಹ್ನ 12.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನದ ಧಮ೯ದಶಿ೯ ಡಾ. ರವಿ.ಎನ್ ದೀಪ ಪ್ರಜ್ವಲಿಸಿ ಈ ಕಾರ್ಯಕ್ರಮ ಉದ್ಘಾಟಿಸಲಿದ್ದು ಮುಳಿಯ ಶ್ರೀ ವೈಷ್ಣವಿ ಕ್ಷೇತ್ರದ ಶ್ರೀ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ ದಿವ್ಯ ಉಪಸ್ಥಿತಿವಹಿಸಲಿದ್ದಾರೆ. ಶ್ರೀ ಧಾಮ ಮಾಣಿಲ, ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀಶ್ರೀಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಯಧುವೀರ್ ಒಡೆಯರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಕರಾವಳಿಯ ಪತ್ರಕರ್ತರಾಗಿ ಸಮಾಜದ ಆಗು ಹೋಗುಗಳ ಬಗ್ಗೆ ನಿಖರ ಮತ್ತು ನಿಷ್ಪಕ್ಷಪಾತ ವರದಿಗಾರಿಕೆಯಲ್ಲಿ ನಿಷ್ಠಾವಂತ ಸೇವೆ ಸಲ್ಲಿಸಿದ ಚಿದಂಬರ ಬೈಕಂಪಾಡಿ ಅವರಿಗೆ ಅತಿಥಿ ಗಣ್ಯರ ಸಮ್ಮುಖದಲ್ಲಿ “ಮಾಧ್ಯಮ ಸಿಂಧೂರ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು

ಚಿದಂಬರ ಬೈಕಂಪಾಡಿ ಅವರ ಕಿರು ಪರಿಚಯ

ಕರಾವಳಿ ಮೂಲದ ಪತ್ರಕರ್ತ ಚಿದಂಬರ ಬೈಕಂಪಾಡಿ. ಮುಂಗಾರು, ಕನ್ನಡಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದಿದ್ದಾರೆ. ಕವಿಯಾಗಿ ಬೇಗುದಿ, ವಾಸ್ತವದ ಲೆಕ್ಕಾಚಾರ, ಕಪ್ಪು ಹುಡುಗ ಮೂರು ಕನವ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತುಳು ಪ್ರೇಮಗೀತೆಗಳು ಇವರ ಧ್ವನಿ ಸುರುಳಿ. ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ‘ಇದು ಮುಂಗಾರು’ ಕೃತಿ ಪತ್ರಿಕೋದ್ಯಮದ ಬಗ್ಗೆಗಿನ ಪುಸ್ತಕ ಬೆಂಗಳೂರಿನ ಅಂಕಿತ ಪ್ರಕಾಶನ ಹೊರತಂದಿದೆ. ಇವರಿಗೆ ಈ ಬಾರಿಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಯ ಒಕ್ಕೂಟದ ಕುಂಭ ಕಲಾವಳಿ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ದಲ್ಲಿ “ಮಾಧ್ಯಮ ಸಿಂಧೂರ” ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *