
ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇದೀಗ ಟೊಮೊಟೊ ಸೇರಿದಂತೆ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ.


ಟೊಮೆಟೋ ದರ ಕೆಜಿಗೆ 100 ರೂ. ಗಡಿ ಸಮೀಪಸಿದ್ದು, ನುಗ್ಗೆಕಾಯಿ ಕೆಜಿಗೆ 500-600 ರೂ.ಗೆ ಮಾರಾಟವಾಗುತ್ತಿದೆ. ಈ ನಡುವೆ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಟೊಮೆಟೊ ಸೇರಿದಂತೆ ಕಾಯಿಪಲ್ಲೆ, ಹಸಿರುಪಲ್ಲೆಗಳ ದರಗಳು ಹೆಚ್ಚಳವಾಗುತ್ತಿದ್ದು, ಬೆಲೆ ಕೇಳಿಸಿಕೊಳ್ಳುವ ಗ್ರಾಹಕ ತಮ್ಮಹಣಕಾಸಿನ ಸ್ಥಿತಿಯನ್ನು ಎರಡು ಎರಡು ಬಾರಿ ಯೋಚನೆ ಮಾಡಿ ಕಾಯಿಪಲ್ಲೆ, ಹಸಿರುಪಲ್ಲೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಹಿಂಗಾರು ಮಳೆಯ ವಿಳಂಬದಿಂದಾಗಿ ಕಡಿಮೆ ಇಳುವರಿ ಹಾಗೂ ಬೆಳೆಗಳಿಗೆ ರೋಗ ಕಾರಣ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆಯಾಗದ ಕಾರಣ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.

ಯಾವ ತರಕಾರಿ ಬೆಲೆ ಎಷ್ಟು ಏರಿಕೆ

ಹಸಿರು ಬಟಾಣಿ ಪ್ರತಿ ಕೆಜಿಗೆ 250 ರೂ.
ಬೀನ್ಸ್ 60-80 ರೂ.
ತೊಂಡೆಕಾಯಿ 80-100 ರೂ.
ತೊಗರಿಕಾಯಿ 60-70 ರೂ.
ಕ್ಯಾರೆಟ್ 60-80 ರೂ.
ಬೀಟ್ರೂಟ್ 60-70 ರೂ.
ಕ್ಯಾಪ್ಸಿಕಮ್ 50-60 ರೂ.
ಹಸಿ ಮೆಣಸಿನಕಾಯಿ 80-100 ರೂ.
ಗೆಡ್ಡೆಕೋಸು 70-80 ರೂ.
ಬೆಂಡೆಕಾಯಿ 60-80 ರೂ.ಗೆ ಏರಿಕೆಯಾಗಿದೆ.

