
ಸುಸಜ್ಜಿತ ಕುಲಾಲ ಭವನವನ್ನು ಸುಮಿತ್ರಾ ರಾಜು ಸಾಲಿಯಾನ್ ಸಭಾಂಗಣ, ಯಶೋಧಾ ಬಾಬು ಸಾಲಿಯಾನ್ ಬಂಟ್ವಾಳ ವೇದಿಕೆ, ಸರಸ್ವತಿ ವಿಶ್ವನಾಥ ಬಂಗೇರ ಕುಳಾಯಿ (ಬಾಲ್ಯನಿ), ನಮ್ರತಾ ಜಗದೀಶ್ ಬಂಜನ್ ಬ್ಯಾಂಕ್ವೆಟ್ ಹಾಲ್, ಸಾವಿತ್ರಿ ಪಿ.ಕೆ. ಸಾಲಿಯಾನ್ ವೇದಿಕೆ, ವಸಂತಿ ಸದಾಶಿವ ಬಂಜನ್ ಕಚೇರಿ ಹಾಗೂ ಡಾ|ಸುರೇಖಾ ರತನ್ ಕುಲಾಲ್ ಮುಂಬಯಿ ಆಡಳಿತ ಕಚೇರಿ ಉದ್ಘಾಟನೆ ನೆರವೇರಿಸಿದರು.




ಮಂಗಳೂರು: ಕುಲಾಲಸಂಘ ಮುಂಬಯಿ ವತಿಯಿಂದ ಮಂಗಳಾದೇವಿ ದೇವಸ್ಥಾನದ ಸನಿಹ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯ ಹೊಂದಿದ ಬಹುಕೋಟಿ ವೆಚ್ಚದ ‘ಕುಲಾಲ ಭವನ ರವಿವಾರ ಉದ್ಘಾಟನೆಗೊಂಡಿತು.

ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ಯೆಸ್ಸೋ ನಾಯ್ಕ್ ಅವರು ಮಾತನಾಡಿ, ಕುಲಾಲ ಸಮಾಜವು ಸಂಘಟನೆಯನ್ನು ಬಲಿಷ್ಠಗೊಳಿಸಿ ಆ ಮೂಲಕ ಸುಸಜ್ಜಿತ ಭವನ ನಿರ್ಮಾಣ ಮಾಡಿದೆ. ಸಮಾಜದ ಶ್ರೇಯಸ್ಸಿನೊಂದಿಗೆ ರಾಷ್ಟ್ರ ಹಿತದ ಕಾರ್ಯ ನಡೆಯುತ್ತಿರುವುದು ಅಭಿನಂದನೀಯ ಎಂದರು.



ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಪವಿತ್ರ ಜಾಗದಲ್ಲಿ ಸುಸಜ್ಜಿತ ಭವನವನ್ನು ನಿರ್ಮಿಸುವ ಮೂಲಕ ಕುಲಾಲ ಸಮಾಜ ಕರಾವಳಿ ಕರ್ನಾಟಕಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದರು.


ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಮೂಲ್ಯರ ಮೌಲ್ಯ ಅಮೂಲ್ಯ. ಪ್ರಾಮಾಣಿ ಕತೆ, ವಿಶ್ವಾಸಕ್ಕೆ ಅವರ ಸೇವೆ ಅದ್ವಿತೀಯ ಎಂದರು.

ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ, ವಿದ್ಯಾಭ್ಯಾಸಕ್ಕಾಗಿ ಬಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಅವಕಾಶ ನೀಡಿದ ಕುಲಾಲ ಸಂಘದ ಮುಂಬಯಿ ಸಂಘಟನೆಯು ಇಂದು ಭವ್ಯ ಭವನ ನಿರ್ಮಿಸಿರುವುದು ಅದ್ವಿತೀಯ ಕಾರ್ಯ ಎಂದರು.
ಸಂಸದ ಕ್ಯಾ। ಬ್ರಿಜೇಶ್ ಚೌಟ ಮಾತನಾಡಿದರು. ಕುಲಾಲ ಸಂಘ ಮುಂಬಯಿ ಅಧ್ಯಕ್ಷ ರಘು ಎ.ಮೂಲ್ಯ ಅಧ್ಯಕ್ಷತೆ ವಹಿಸಿದ್ದರು.

ನಡುಬೆಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಡಾ| ರವಿ ಎನ್., ಶ್ರೀ ಮಂಗಳಾದೇವಿ ದೇವಸ್ಥಾನದ ಮ್ಯಾನೆಜಿಂಗ್ ಟ್ರಸ್ಟಿ ಅರುಣ್ ಕುಮಾರ್ ಐತಾಳ್, ಸೇಂಟ್ ರೀಟಾ ಚರ್ಚ್ ಕಾಸ್ಸಿಯದ ಪ್ಯಾರೀಸ್ ಪ್ರೀಸ್ಟ್ ವಂ। ಎರಿಕ್ ಕ್ರಾಸ್ತಾ, ಶಾಸಕರಾದ ಡಿ.ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ಐವನ್ ಡಿ’ಸೋಜಾ, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಸಂಸದ ನಳಿನ್ ಕುಮಾರ್, ಪ್ರಮುಖರಾದ ಮಿಥುನ್ ರೈ, ಐಕಳ ಹರೀಶ್ ಶೆಟ್ಟಿ ಪ್ರವೀಣ್ ಭೋಜ ಶೆಟ್ಟಿ ಜಯಕೃಷ್ಣ ಎ.ಶೆಟ್ಟಿ ಸೂರ್ಯಕಾಂತ್ ಜಯ ಸುವರ್ಣ, ರವೀಂದ್ರನಾಥ ಭಂಡಾರಿ, ಪ್ರೇಮಾನಂದ ಶೆಟ್ಟಿ ಸಂಜೀವ ಕೆ. ಬಂಗೇರ, ರಮಾನಂದ ಬಂಗೇರ, ಲಯನ್ ಅನಿಲ್ ದಾಸ್, ಪೃಥ್ವಿರಾಜ್ ಎಡಪದವು, ಕಸ್ತೂರಿ ಪಂಜ, ರವೀಂದ್ರ ಮುನ್ನಿಪ್ಪಾಡಿ, ಮಯೂರ್ ಉಳ್ಳಾಲ್, ದಿವಾಕರ ಮೂಲ್ಯ ಉಪಸ್ಥಿತರಿದ್ದರು.

ಕುಲಾಲ ಸಂಘ ಮುಂಬಯಿ ಗೌರವ ಅಧ್ಯಕ್ಷ ಪಿ.ದೇವದಾಸ್ ಎಲ್. ಕುಲಾಲ್ ಪ್ರಸ್ತಾವಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಬಿ.ಸಾಲಿಯಾನ್ ಸ್ವಾಗತಿಸಿದರು. ಕುಲಾಲ ಭವನ ಉದ್ಘಾಟನಾ ಸಮಾರಂಭದ ಕಾರ್ಯಾಧ್ಯಕ್ಷ ಬಿ. ದಿನೇಶ್ ಕುಲಾಲ್ ಸಮ್ಮಾನಿತರ ವಿವರ ನೀಡಿದರು. ಉಪಾಧ್ಯಕ್ಷ ಡಿ.ಐ.ಮೂಲ್ಯ ವಂದಿಸಿದರು.

