
ಮಂಗಳೂರು: ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ ಮತ್ತು ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಸಹಯೋಗದಲ್ಲಿ ನಡೆಯುವ ಕುಂಭ ಕಲಾವಳಿ – 2026 ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ದೇವಿ ದೇವಸ್ಥಾನ ಪಾಂಡೇಶ್ವರದಲ್ಲಿ ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆ ಮಾಡಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.



ಕುಂಭ ಕಲಾವಳಿ ಕಾರ್ಯಕ್ರಮವು ದಿನಾಂಕ ಜನವರಿ 4 , 2026 ಆದಿತ್ಯ ವಾರ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಪದಗ್ರಹಣ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಸೇರಿದಂತೆ ಆಸಕ್ತರಿಗೆ ನೆರವು ನೀಡಲಾಗುತ್ತದೆ.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರು ಶ್ರೀ ಸದಾಶಿವ ಕುಲಾಲ್ ಪಾಂಡೇಶ್ವರ ಹಾಗೂ ವೇದಿಕೆಯ ಜಿಲ್ಲಾಧ್ಯಕ್ಷರಾದ ಲಯನ್ ಅನಿಲ್ ದಾಸ್. ನಿಕಟ ಪೂರ್ವ ರಾಜ್ಯ ಅಧ್ಯಕ್ಷರಾದ ಗಂಗಾಧರ್ ಬಂಜನ್, ಹಾಗೂ ಜಯೇಶ್ ಗೋವಿಂದ್, ಮಹಾಬಲ ಮಾಸ್ಟರ್, ಅಶೋಕ್ ಕುಳೂರ್. H. K. ನಯನಾಡು, ಹಾಗೂ ಸಾಂಸ್ಕೃತಿಕ ಸಂಯೋಜಕರಾದ ರಾಧಕೃಷ್ಣ ಬಂಟ್ವಾಳ ಮತ್ತು ದೇವಸ್ಥಾನದ ಸಮಿತಿ ಸದಸ್ಯರು. ಸಿಬ್ಬಂದಿಗಳು ಉಪಸ್ಥಿತರಿದ್ದರು.




