
Read Time:1 Minute, 24 Second
ಬೈಂದೂರು: ನಾವುಂದ ಎನ್ಎಚ್–66 ಮೇಲ್ಸೇತುವೆ ಬಳಿ ಮಂಗಳವಾರ ರಾತ್ರಿ ನಡೆದ ಘಟನೆ ಜನರಲ್ಲಿ ಕ್ಷಣ ಮಾತ್ರ ಆತಂಕ ಹುಟ್ಟಿಸಿತು. ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಅದು ಸಂಪೂರ್ಣವಾಗಿ ಕರಕಲಾಯಿತು.



ಕುಂದಾಪುರದಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ಕಾರಿನಿಂದ ಹೊಗೆ ಏರಲು ಪ್ರಾರಂಭವಾದ ಮೇಲೆ ಒಳಗಿದ್ದ ಇಬ್ಬರೂ ತಕ್ಷಣ ಕೆಳಗುಳಿದು ಪಾರಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್ವೇ ಬೆಂಕಿಗೆ ಕಾರಣವಾಗಿರಬಹುದೆಂದು ಪ್ರಾಥಮಿಕ ಅಂದಾಜು.
ಘಟನೆ ಹೆದ್ದಾರಿಯ ಮೇಲ್ಸೇತುವೆಯ ಮೇಲೆಯೇ ನಡೆದ ಕಾರಣ ಕೆಲಕಾಲ ಸಂಚಾರದಲ್ಲೂ ಅಸೌಕರ್ಯ ಉಂಟಾಯಿತು. ನಂತರ ಸ್ಥಳಕ್ಕಾಗಮಿಸಿದ ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿ ತ್ವರಿತ ಕ್ರಮ ಕೈಗೊಂಡು ಬೆಂಕಿ ನಂದಿಸಿದರು.


ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಅಧಿಕಾರಿ ರಾಜೇಶ್, ಮುಖ್ಯ ಅಗ್ನಿಶಾಮಕ ಸಿಬ್ಬಂದಿ ಚೆನ್ನಯ್ಯ ಪೂಜಾರಿ, ಶೀನ ನಾಯ್ಕ, ಚಾಲಕರು ಆನಂದ ಮತ್ತು ರಾಘವೇಂದ್ರ, ಅಗ್ನಿಶಾಮಕರಾದ ರವಿ, ಸುರೇಶ್, ಅರುಣ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.


