
Read Time:57 Second
ಉಡುಪಿ: ಮಂದಾರ್ತಿ ಮೇಳದ ಬಣ್ಣದ ವೇಷಧಾರಿ ಈಶ್ವರ ಗೌಡ ನೆಮ್ಮಾರ್ ಮಹಿಷಾಸುರ ಪಾತ್ರ ನಿರ್ವಹಿಸಿದ ಬಳಿಕ ಬಣ್ಣ ತೆಗೆಯುವ ಮೊದಲೇ ಹೃದಯಾಘಾತದಿಂದ ಕುಸಿದು ನಿಧನ ಹೊಂದಿದ ಘಟನೆ ಬುಧವಾರ ಮಧ್ಯ ರಾತ್ರಿ ಕುಂದಾಪುರದ ಸೌಡ ಸಮೀಪ ನಡೆದಿದೆ.


2ನೇ ಮೇಳದ ಪ್ರತಿಭಾನ್ವಿತ ಕಲಾವಿದ ಶೃಂಗೇರಿ ಸಮೀಪದ ನೆಮ್ಮಾರ್ ನಿವಾಸಿಯಾಗಿದ್ದರು. ದೇವಿ ಮಾಹಾತ್ಮ ಪ್ರಸಂಗದಲ್ಲಿ ಮಹಿಷಾಸುರ ಪಾತ್ರ ಕೊನೆಯಾಗುತ್ತಿದ್ದಂತೆ ಸಂಪೂರ್ಣ ವೇಷ ಕಳಚುವ ಮುನ್ನವೇ ಹೃದಯಾಘಾತದಿಂದ ಕುಸಿದಿದ್ದಾರೆ. ಸಹಕಲಾವಿದರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಇಹಲೋಕ ತ್ಯಜಿಸಿದ್ದರು. ಈಶ್ವರ ಗೌಡ ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

