
ಶಿರಿಯಾರ ಸೇವಾ ಸಹಕಾರಿ ಸಂಘ, ಕಾವಡಿ ಶಾಖೆಯಲ್ಲಿ ನಡೆದ 1 ಕೋಟಿಯ 70 ಲಕ್ಷ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಕೋಟಾ ಪೊಲೀಸರ ಬಲೆಗೆ ಸಿಕ್ಕಿದ್ದಾನೆ.


ಕೋಟ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 205/2025, ಬಿ.ಎನ್.ಎಸ್.–2023ರ ಕಲಂ 318(3)(4), 112 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಘದ ಮ್ಯಾನೇಜರ್ ಸುರೇಶ್ ಭಟ್ (38) ಹಾಗೂ ಕಿರಿಯ ಗುಮಾಸ್ತ ಹರೀಶ್ ಕುಲಾಲ್ ವಿರುದ್ಧ ವಂಚನೆ ಆರೋಪ ಹೊರಿಸಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆಯೇ ಇಬ್ಬರೂ ತಲೆಮರೆಸಿಕೊಂಡಿದ್ದರು.
ಪರಾರಿಯಾಗಿದ್ದ ಸುರೇಶ್ ಭಟ್ ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದ ಜಾನುವಾರಕಟ್ಟೆ, ಗೇರು ಬೀಜ ಪ್ಯಾಕ್ಟರಿ ಬಳಿ ಅಡಗಿ ಕುಳಿತಿದ್ದನ್ನು ಪೊಲೀಸರು ಗುರುತಿಸಿ ಬಂಧಿಸಿದ್ದಾರೆ.

ಬಂಧನ ಕಾರ್ಯಾಚರಣೆ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ರವರ ಮಾರ್ಗದರ್ಶನದಲ್ಲಿ, ಕೋಟಾ ಠಾಣೆಯ ಪಿಎಸ್‌ಐ ಪ್ರವೀಣ ಕುಮಾರ್ ಆರ್., ಪಿಎಸ್‌ಐ (ಕಾ.&ಸು.) ಮಾಂತೇಶ್ ಜಾಭಗೌಡ, ಪಿಎಸ್‌ಐ (ತನಿಖೆ) ಮತ್ತು ಸಿಬ್ಬಂದಿಗಳಾದ ಸಿಹೆಚ್‌ಸಿ ಕೃಷ್ಣಶೇರೆಗಾರ, ಸಿಹೆಚ್‌ಸಿ ಶ್ರೀಧರ್, ಪಿಸಿ ವಿಜಯೇಂದ್ರ ಸೇರಿ ನಡೆಸಲಾಯಿತು.

ಘಟನೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ.

