ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ!! 250 ಸಿಮ್ ಬಳಸಿ 300 ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿದ್ದ ಖದೀಮರು ಅರೆಸ್ಟ್

0 0
Read Time:3 Minute, 13 Second

ಮಂಗಳೂರು: ಬರೋಬ್ಬರಿ 250ಕ್ಕೂ ಅಧಿಕ ಸಿಮ್‌ಗಳನ್ನು ಬಳಸಿಕೊಂಡು 300ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಲಕ್ಷಗಟ್ಟಲೆ ಹಣವನ್ನು ಲಪಟಾಯಿಸಿದ ಆರೋಪಿಗಳನ್ನು ಬಂಧಿಸುವ ಮೂಲಕ ಬೃಹತ್ ಸೈಬರ್ ವಂಚನಾ ರಾಕೆಟ್ ಅನ್ನು ಮಂಗಳೂರಿನ ಸಿ.ಇ.ಎನ್. ಪೊಲೀಸರು ಪತ್ತೆಮಾಡಿದ್ದಾರೆ.

ತ್ರಿಪುರಾದ ಧಲಾಯಿ ಎಂಬಲ್ಲಿನ ರಂಗ್ ರುಂಘಾ ರೀಂಗ್ ಎಂಬವರ ಪುತ್ರ ಡಮೆಂಜೋಯ್ ರೀಂಗ್(27) ಹಾಗೂ ಪಣಿಪುರದ ಕಂಗ್ಪೊಕ್ಪಿ ಜಿಲ್ಲೆಯ ಹಮ್ನ್‌ಗ್ಟೆ ರೀಯಲ್ ಕೋಂ @ ಮಂಗ್ಟೆ ಅಮೋಶ್ ಬಂಧಿತ ಆರೋಪಿಗಳು. ಇತ್ತೀಚೆಗೆ ಮಂಗಳೂರು ನಗರ ಸಿ.ಇ.ಎನ್. ಕ್ರೈಂ ಪೊಲೀಸ್ ಠಾಣೆಯಲ್ಲಿ 45/2024 Section 66(c) 66(ಡಿ) ಐಟಿ ಆಕ್ಟ್ ಮತ್ತು ಕಲಂ.೪೨೦ ಐಪಿಸಿ ಅಡಿ ಪ್ರಕಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಯಾರೋ ಅಪಚಿರಿತ ವ್ಯಕ್ತಿ ದೂರುದಾರರಿಗೆ ಕಸ್ಟಮ್ಸ್ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 7,27,000 ಹಣವನ್ನು ಪಡೆದು ವಂಚನೆ ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಕರಣ ತನಿಖೆ ನಡೆಸಿದಾಗ ಬೃಹತ್ ಸೈಬರ್ ವಂಚನಾ ರಾಕೆಟ್ ಬಯಲಾಗಿದೆ.

ಈ ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಪೊಲೀಸರು ಪಡೆದುಕೊಂಡು ಪರಿಶೀಲಿಸಿದ್ದರು. ಈ ವೇಖೆ ಬ್ಯಾಂಕ್ ಖಾತೆದಾರ ಡಮೆಂಜೋಯ್ ರೀಂಗ್ ಎಂಬಾಣ ನ.13 ರಂದು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಲಾಗಿತ್ತು. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಆದೇಶಿತ್ತು. ಪ್ರಕರಣದಲ್ಲಿ ತನಿಖೆ ಮುಂದುವರೆಸಿದ ಪೊಲೀಸರು ಬ್ಯಾಂಕ್ ಖಾತೆಗಳನ್ನು ಪಡೆದುಕೊಂಡು ತನಿಖೆ ಮುಂದುವರಿಸಿದ್ದರು.

ಈ ವೇ ಸಿಕ್ಕ ಸುಳಿವಿನ ಆಧಾರದಲ್ಲಿ ಹಮ್ನ್‌ಗ್ಟೆ ರೀಯಲ್ ಕೋಂ @ ಮಂಗ್ಟೆ ಅಮೋಶ್ ಎಂಬಾತನನ್ನು ನ.೧೫ರಂದು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈತನಿಗೂ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಆದೇಶಿದೆ. ತನಿಖೆಯ ವೇಳೆ ಆರೋಪಿತನಾದ ಹಮ್ನ್‌ಗ್ಟೆ ರೀಯಲ್ ಕೋಂ @ ಮಂಗ್ಟೆ ಅಮೋಶ್ 300 ಕ್ಕೂ ಹೆಚ್ಚೂ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿದ್ದು, ಅದಕ್ಕಾಗಿ ಬರೋಬ್ಬರಿ 250 ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಸೈಬರ್ ವಂಚನೆಗೆ ದುರ್ಬಳಕೆ ಮಾಡಿರುವುದು ಪತ್ತೆಯಾಗಿದೆ.

ಈತನಿಂದ 8 ಮೊಬೈಲ್, 20- ವಿವಿಧ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳು, 18 ವಿವಿಧ ಬ್ಯಾಂಕ್‌ಗಳ ಪಾಸ್ ಬುಕ್‌ಗಳು, 11 ವಿವಿಧ ಬ್ಯಾಂಕ್‌ಗಳ ಚೆಕ್ ಬುಕ್ ಹಾಗೂ 7 ಸಿಮ್ ಕಾರ್ಡ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಸೆನ್ ಕ್ರೈಂ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *