
ಮಂಗಳೂರಿನ ಮಂಗಳಾದೇವಿ ಸಮೀಪ ಮುಂಬಯಿ ಕುಲಾಲ ಸಂಘದ ಒಡೆತನದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕುಲಾಲ ಭವನವು ನವೆಂಬರ್ 23ರಂದು ಲೋಕಾರ್ಪಣೆಗೊಳ್ಳಲಿದೆ


ಇದರ ಉದ್ಘಾಟನಾ ಸಮಾರಂಭಕ್ಕೆ ಅಧ್ಯಕ್ಷರಾದ ರಘು ಎ.ಕುಲಾಲ್, ಗೌರವ ಅಧ್ಯಕ್ಷರಾದ ದೇವದಾಸ್ ಎಲ್. ಕುಲಾಲ್, ಉಪಾಧ್ಯಕ್ಷ ಡಿ.ಐ.ಮೂಲ್ಯ, ಗೌ.ಪ್ರಧಾನ ಕಾರ್ಯದರ್ಶಿ ಕರುಣಾಕರ್ ಬಿ ಸಾಲಿಯಾನ್, ಗೌ.ಕೋಶಾಧಿಕಾರಿ ಜಯ ಎಸ್. ಅಂಚನ್, ಕಟ್ಟಡ ನಿರ್ಮಾಣ ಸಮಿತಿ ಕಾರ್ಯಧ್ಯಕ್ಷರು, ಗಿರೀಶ್ ಬಿ ಸಾಲಿಯಾನ್, ಕಟ್ಟಡ ನಿರ್ಮಾಣ ಸಮಿತಿ ಉಪಕಾರ್ಯಧ್ಯಕ್ಷರು ಸುನಿಲ್ ಆರ್ ಸಾಲಿಯಾನ್, ಮಹಿಳಾ ವಿಭಾಗ ಕಾರ್ಯಧ್ಯಕ್ಷ ಸುಚಿತಾ ಡಿ. ಬಂಜನ್, ಸ್ಥಳೀಯ ಸಮಿತಿ ಕಾರ್ಯಧ್ಯಕ್ಷ ವಿಶ್ವನಾಥ್ ಬಂಗೇರ, ಉದ್ಘಾಟನಾ ಕಾರ್ಯಕ್ರಮ ಸಂಚಲನ ಸಮಿತಿ ಕಾರ್ಯಧ್ಯಕ್ಷ ಬಿ. ದಿನೇಶ್ ಕುಲಾಲ್, ಕಟ್ಟಡ ನಿರ್ಮಾಣ ಸಮಿತಿ ಕಾರ್ಯದರ್ಶಿ ಉಮೇಶ್ ಬಂಗೇರ ಮತ್ತು ಸ್ಥಳೀಯ ಸಮಿತಿಗಳು ಹಾಗೂ ಸರ್ವ ಸದಸ್ಯರು ಮತ್ತು ಗಣ್ಯತಿ ಗಣ್ಯರು ಭಾಗವಹಿಸಲಿದ್ದಾರೆ.
ಕುಲಾಲ ಕುಂಬಾರರ ವೇದಿಕೆಯ ಲಯನ್ ಅನಿಲ್ ದಾಸ್ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರೊಡನೆ ಚರ್ಚೆ ನಡೆಸಿ ಕುಲಾಲ ಮಂದಿರ ಮಂಗಳಾದೇವಿಯ ಈ ಉದ್ಗಾಟನಾ ಸಮಾರಂಭದಲ್ಲಿ ಸಮಾಜದ ಎಲ್ಲಾ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.


