
ಕಾಸರಗೋಡು: ಕುಲಾಲ ವೇದಿಕೆ ಮಂಜೇಶ್ವರ ಇದರ ವತಿಯಿಂದ ಬೃಹತ್ ರಕ್ತದಾನ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ, ‘ಗಿಳಿವಿಂಡು’ ಮಂಜೇಶ್ವರ ಇಲ್ಲಿ ನಡೆಯಿತು.


ಇದೇ ಸಂದರ್ಭದಲ್ಲಿ ಲ.ಅನಿಲ್ ದಾಸ್ ಕುಲಾಲ ಕುಂಬಾರರ ವೇದಿಕೆ ಜಿಲ್ಲಾಧ್ಯಕ್ಷರು ದ.ಕ ಜಿಲ್ಲೆ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರದ ಪ್ರಯುಕ್ತ ಕುಲಾಲ ಯುವ ವೇದಿಕೆ ಮಂಜೇಶ್ವರ ಇವರು ರಾಜಕೀಯ ಮುಖಂಡರು ಮತ್ತು ಅತಿಥಿ ಗಣ್ಯರ ನೇತೃತ್ವದಲ್ಲಿ ಸನ್ಮಾನಿಸಿದರು.

ಇನ್ನು ಕುಲಾಲ ಸಂಘಟನೆಗೆ ಮತ್ತು ಯುವ ವೇದಿಕೆಯ ಹಾಗೂ ದ.ಕ ಜಿಲ್ಲೆಯ ಭಾಂದ್ಯವದ ಬಗ್ಗೆ ಹಾಗೂ ಜ.4 ರಂದು ನಡೆಯಲಿರುವ ಕುಂಭ ಕರಾವಳಿ ಸೇವಾ ಕಾರ್ಯಕ್ರಮ ಕಾರ್ಯಕ್ರಮ ಹಾಗೂ ಪದಗ್ರಹಣ ಸಮಾರಂಭದ ಆಮಂತ್ರಣವನ್ನು ಲ.ಅನಿಲ್ ದಾಸ್ ವಿವರಿಸಿದರು.

ಶ್ರೀ ಕೃಷ್ಣ ಭಟ್ ಮತ್ತು ಶ್ರೀ ತಿಮಿರಿ ಬೆಳ್ಚಾಡರು ದೀಪ ಪ್ರಜ್ವಲನೆಗೈದರು, ಅಧ್ಯಕ್ಷರಾಗಿ ಶ್ರೀ ರಾಮಚಂದ್ರ ಮಾಸ್ತರ್ ಮೀಯಪದವು, ವಿಶೇಷ ಆಹ್ವಾನಿತರಾಗಿ ಯಾದವ ಬಡಾಜೆ, ಡಾ| ಅಶ್ವಿನಿ ಎಸ್. ಶೆಟ್ಟಿ, PMJF ಲಯನ್ ಇಬ್ರಾಹಿಂ ಹಾಜಿ ಕಲ್ಲೂರು, Be.ಜೋಸೆಫ್ ಕ್ರಾಸ್ತಾ, ಲಯನ್ ಸಂಜೀವ ಗೌಡ ಕತ್ಲಡ್ಕ, ತುಳಸಿದಾಸ್ ಮಂಜೇಶ್ವರ, ನವೀನ್ ಮೊಂತೇರೊ ಮಂಜೇಶ್ವರ, ನಿಶಾಂತ್ ಜಪ್ಪಿನಮೊಗರು, ನವೀನ್ ಮಜಲು, ಸುನಿಲ್ ಕುಮಾರ್ ಕಣ್ವತೀರ್ಥ, ಗಣೇಶ್ ಕುಮಾರ್ ಬಡಾಜೆ, ಕವಿರಾಜ್ ಉದ್ಯಾವರ, ಸುನಿಲ್ ಕುಮಾರ್, ಚೇತನ್ ಕೀರ್ತೇಶ್ವರ, ಸುದೀಪ್ ಕೀರ್ತೇಶ್ವರ, ಸಂತೋಷ್ ಕುಮಾರ್ ಕಾಸರಗೋಡು ಉಪಸ್ಥಿತರಿದ್ದರು.


