
Read Time:1 Minute, 21 Second
ಮಂಗಳೂರು: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲೂರು ಗ್ರಾಮದ ಬದ್ರಿಯಾನಗರ ಪರಿಸರದಲ್ಲಿ ಗೋವನ್ನು ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.


ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕ ಅರುಣ್ ಕುಮಾರ್ ಅವರು ಖಚಿತ ಮಾಹಿತಿಯಂತೆ ಸಿಬಂದಿಯೊಂದಿಗೆ ಮಲ್ಲೂರು ಗ್ರಾಮದ ಕಂಜಿಲಕೋಡಿ ಎಂಬಲ್ಲಿ ಗೂಡ್ಸ್ ವಾಹನವನ್ನು ನಿಲ್ಲಿಸಿ ಪರಿಶೀಲಿಸಿದಾಗ ವಾಹನದ ಚಾಲಕ ಜೋಸೆಫ್ ನೀಲೇಶ್ ಡಿ’ಅಲ್ಮೆಡಾ ಮತ್ತು ಕಣ್ಣೂರಿನ ಮಜೀದ್ ಎಂಬವರು ಕಣ್ಣೂರಿನಿಂದ ಕಲಾಯಿ ಕಡೆಗೆ ಯಾವುದೇ ಪರವಾನಿಗೆ ಇಲ್ಲದೆ ಒಂದು ಹಸುವನ್ನು ಸಾಗಿಸುತ್ತಿರುವುದು ಕಂಡು ಬಂದಿದೆ.
ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದುಕೊಳ್ಳಲಾಗಿದ್ದು, ನ್ಯಾಯಾಲಯದ ಅನುಮತಿ ಪಡೆದು ಹಸುವನ್ನು ಗೋಶಾಲೆಗೆ ಹಸ್ತಾಂತರಿಸಲಾಗಿದೆ.

ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವಿಜಯ ಕ್ರಾಂತಿ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಗವಿರಾಜ್ ನಿರ್ದೇಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.


